4.5 ಲಕ್ಷ ಹಣದಾಸೆಗೆ ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಮಗುವನ್ನು ಮಾರಿದ್ಲು

Public TV
2 Min Read

– ತಾಯಿ ಸೇರಿ 11 ಜನ ಅರೆಸ್ಟ್

ರಾಂಚಿ: ಮಹಿಳೆಯೊಬ್ಬಳು (Woman) 4.5 ಲಕ್ಷ ರೂ. ಹಣದ (Money) ಆಸೆಗೆ ಮಗುವಿಗೆ (Baby) ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಮಾರಾಟ (Sale) ಮಾಡಿರುವ ಘಟನೆ ಜಾರ್ಖಂಡ್‌ನ (Jharkhand) ಛತ್ರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಮಗುವಿನ ತಾಯಿ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.

ನವಜಾತ ಶಿಶುವನ್ನು (Newborn Baby) ಮಾರಾಟ ಮಾಡಿದ ಮಹಿಳೆಯನ್ನು ಆಶಾ ದೇವಿ ಎಂದು ಗುರುತಿಸಲಾಗಿದೆ. ಆಕೆಗೆ ಹುಟ್ಟಿದ ಗಂಡು ಮಗುವನ್ನು 4.5 ಲಕ್ಷ ರೂ.ಗಾಗಿ ಮಾರಾಟ ಮಾಡಿದ್ದಾಳೆ. ಘಟನೆ ಬಗ್ಗೆ ವೈದ್ಯರೊಬ್ಬರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಕೇವಲ 24 ಗಂಟೆಗಳೊಳಗಾಗಿ ಮಗುವನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್, ಆಶಾ ದೇವಿಯಿಂದ 1 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಾಗಿದೆ ಎಂದು ತಿಳಿಸಿದ್ದಾರೆ. ಮೊದಲಿಗೆ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಡಿಂಪಲ್ ದೇವಿ ಎಂಬವರಿಗೆ ಮಾರಿರುವುದಾಗಿ ತಿಳಿಸಿದ್ದಾಳೆ. ಬಳಿಕ ಡಿಂಪಲ್ ದೇವಿಯನ್ನು ಪೊಲೀಸರು ಬಂಧಿಸಿ, ಇತರ ಆರೋಪಿಗಳ ಬಗ್ಗೆ ಮಾಹಿತಿ ಪಡೆದು, ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐದನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಓರ್ವ ಬಂಧನ

ವರದಿಗಳ ಪ್ರಕಾರ ಆಶಾ ದೇವಿ ಹಾಗೂ ಆಕೆಯ ಪತಿ 4.5 ಲಕ್ಷ ರೂ. ಹಣಕ್ಕಾಗಿ ಮಗುವನ್ನು ಮಾರಾಟ ಮಾಡಲು ಛತ್ರ ಹಾಗೂ ಬೊಕಾರೊದ ಇಬ್ಬರು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆಶಾ ದೇವಿ ಮಗುವಿಗೆ ಜನ್ಮ ನೀಡಿದ ಬಳಿಕ ಅದನ್ನು ಮಾರಿ 1 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾಳೆ. ಉಳಿದ 3.5 ಲಕ್ಷ ರೂ. ಹಣವನ್ನು ದಲ್ಲಾಳಿಗಳು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ವೈದ್ಯ ಮನೀಶ್ ಲಾಲ್ ಹೇಳಿಕೆ ಮೇರೆಗೆ ಛತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಬ್ಬರು ಹೆಂಡಿರನ್ನು ಮ್ಯಾನೇಜ್ ಮಾಡಲು ಹೋದ ಪೇದೆ – ಪತ್ನಿಯಿಂದಲೇ ಬರ್ಬರ ಹತ್ಯೆ

Share This Article
477 Comments

Leave a Reply

Your email address will not be published. Required fields are marked *