ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ- ಸಿಎಂ ಕಂಡು ಕೈ ಮುಗಿದ ಮಹಿಳೆ

Public TV
1 Min Read

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಸಿಎಂ ಕಂಡು ಕೈ ಮುಗಿದ ಪ್ರಸಂಗವೊಂದು ನಡೆದಿದೆ.

ಸಿದ್ದರಾಮಯ್ಯ (Siddaramaiah) ಅವರು ಇಂದು ಮೈಸೂರಿನ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ತಮ್ಮ ಕಾರಿನತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮದ ಮಹಿಳೆಯೊಬ್ಬರು ಸಿಎಂ ನೋಡಿ ಕೈ ಮುಗಿದಿದ್ದಾರೆ. ಬಳಿಕ ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ ಎಂದು ಆಶೀರ್ವಾದ ಮಾಡಿದ್ದಾರೆ.

ಅಲ್ಲದೆ ನಿನ್ನನ್ನು ನೋಡಿ ಸಂತೋಷ ಆಯ್ತು ಎಂದು ಹೇಳಿದ್ದಾರೆ. ಮಹಿಳೆಯ ಮಾತು ಕೇಳಿ ಮುಗುಳು ನಗೆ ಬೀರಿದ ಸಿಎಂ ಕಾರು ಹತ್ತಿ ತೆರಳಿದರು.

ಕಾವೇರಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತಿಭಟನೆ ಮಾಡಲು ನಮ್ಮದೇನು ತಕರಾರಿಲ್ಲ. ಆದರೆ ರಾಜಕೀಯ ಮಾಡಬಾರದು. ಕಾವೇರಿ ವಿವಾದವನ್ನು ರಾಜಕೀಯಕ್ಕೆ ಹೋಲಿಸುವುದು ರಾಜ್ಯದ ಹಿತದೃಷ್ಟಿಯಲ್ಲಿ ಒಳ್ಳೆಯದಲ್ಲ. ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಹೊರತು ಜನರ ಹಿತದೃಷ್ಟಿಗಾಗಲಿ, ನಾಡಿನ ಹಿತದೃಷ್ಟಿಗಾಗಲಿ ಮಾಡುತ್ತಿಲ್ಲ ಎಂದರು.

ಕರ್ನಾಟಕ ಬಂದ್ (Karnataka bandh) ಕುರಿತು ಮಾತನಾಡಿದ ಅವರು, ಯಾವುದೇ ಬಂದ್‍ಗಳನ್ನು ಮಾಡಬಾರದು, ಮೆರವಣಿಗೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಆದರೆ ಇದಕ್ಕೆ ನಾವೇನೂ ಅಡ್ಡಿಪಡಿಸಲು ಹೋಗುವುದಿಲ್ಲ ಎಂದು ತಿಳಿಸಿದರು. ಕಾವೇರಿ ವಿವಾದದ ಕುರಿತು ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ರಾಜ್ಯಸರ್ಕಾರ ರಾಜ್ಯದ ಹಿತ್ತಾಸಕ್ತಿ ಕಾಪಾಡಲು ಬದ್ಧವಾಗಿದೆ. ನಮಗೆ ಅಧಿಕಾರ ಮುಖ್ಯ ಅಲ್ಲಾ. ರಾಜ್ಯದ ಜನರ ಹಿತ ಮುಖ್ಯ ಎಂದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್