ಅಕ್ರಮ ಸಂಬಂಧಕ್ಕೆ ಬೇಸತ್ತು ಇನ್ಸ್‌ಪೆಕ್ಟರ್ ಪತಿಯನ್ನೇ ಹತ್ಯೆಗೈದ ಪತ್ನಿ

Public TV
1 Min Read

ಲಕ್ನೋ: ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯನ್ನೇ ಹತ್ಯೆಗೈದಿದ್ದ ಪತ್ನಿ ಹಾಗೂ ಆಕೆಯ ಸಹೋದರನನ್ನು ಉತ್ತರ ಪ್ರದೇಶದ (Uttar Pradesh) ಪೊಲಿಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಭಾವನ ಸಿಂಗ್ ಮತ್ತು ಆಕೆಯ ಸಹೋದರ ದೇವೇಂದ್ರ ಕುಮಾರ್ ವರ್ಮಾ ಎಂದು ಗುರುತಿಸಲಾಗಿದೆ. ಆರೋಪಿಗಳು ಇನ್ಸ್‌ಪೆಕ್ಟರ್ ಆಗಿದ್ದ ಸತೀಶ್ ಸಿಂಗ್ ಅವರನ್ನು ಹತ್ಯೆಗೈದಿದ್ದರು. ಅಲ್ಲದೇ ಪ್ರಕರಣದ ದಿಕ್ಕು ತಪ್ಪಿಸಲು ಸೈಕಲ್ ಮೇಲೆ ಬಂದ ವ್ಯಕ್ತಿ ಕೊಲೆಗೈದು ಹೋಗಿದ್ದಾಗಿ ಕತೆಕಟ್ಟಿದ್ದರು. ಕೊಲೆ ನಡೆದ ಸ್ವಲ್ಪ ದೂರದಲ್ಲಿ ಸೈಕಲ್ ಹಾಗೂ ಬಟ್ಟೆಯನ್ನು ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಏರ್‌ಪೋರ್ಟ್ ಮೇಲೆ ಅಪರಿಚಿತ ಡ್ರೋನ್ ಹಾರಾಟ – ಹೆಚ್ಚಿದ ಆತಂಕ

ತನಿಖೆಯ ವೇಳೆ ಇನ್ಸ್‌ಪೆಕ್ಟರ್ ಸತೀಶ್ ಸಿಂಗ್ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಭಾವನಾ ಸಿಂಗ್ ಮತ್ತು ಸತೀಶ್ ಸಿಂಗ್ ನಡುವೆ ನಿರಂತರವಾಗಿ ವಾಗ್ವಾದ ನಡೆಯುತ್ತಿತ್ತು. ಇದರಿಂದ ಆತನನ್ನು ಹತ್ಯೆಗೈಯಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಗೆ 10 ಕಿಲೋಮೀಟರ್ ವ್ಯಾಪ್ತಿಯ 400 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೀಳಗಿಯ ಚಾಲಕ

Share This Article