ಚಂಡೀಗಢ: ಮಹಿಳೆಯೊಬ್ಬರಿಗೆ ಮರು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಅತ್ಯಾಚಾರವೆಸಗಿದ ಘಟನೆ ದಾಬ್ರಾ ಚೌಕ್ ಬಳಿಯ ಹೋಟೆಲ್‍ನಲ್ಲಿ ನಡೆದಿದೆ.
ಮಹಿಳೆಯ ಮಾಜಿ ಪತಿ ತಮ್ಮ ಮೇಲೆ ಕುಡಿದ ಅಮಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅರ್ಬನ್ ಎಸ್ಟೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ
ಮಹಿಳೆಯು ದಾಬ್ರಾ ಚೌಕ್‍ನ ಸಲೂನ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತೆ ತಮ್ಮ ದೂರಿನಲ್ಲಿ ತಾನು 2019 ರಲ್ಲಿ ಅವನನ್ನು ವಿವಾಹವಾಗಿದ್ದೆ ಎಂದು ತಿಳಿಸಿದ್ದಾರೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ಪತಿ ಮತ್ತು ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ನಂತರ ಅವರು ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ಕೂಡಾ ದಾಖಲಿಸಿದ್ದಾರೆ. ನಂತರ ಇಬ್ಬರ ನಡುವಿನ ರಾಜಿ ನಂತರ ಹಿಂಪಡೆಯಲಾಯಿತು. ಆದಾಗ್ಯೂ, ದಂಪತಿ ಆಗಸ್ಟ್ 2021ರಲ್ಲಿ ವಿಚ್ಛೇದನ ಪಡೆದಿದ್ದರು.
ನಂತರ ತನ್ನ ಮಾಜಿ ಪತಿ ತನ್ನಲ್ಲಿ ಕ್ಷಮೆಯಾಚಿಸಿದ್ದಾನೆ ಮತ್ತು ಸೆಪ್ಟೆಂಬರ್ 2021ರಲ್ಲಿ ತನಗೆ ಉಂಗುರವನ್ನು ಮರು ನೀಡಿದ್ದು, ಅವನು ತನ್ನನ್ನು ಮರುಮದುವೆ ಮಾಡಿಕೊಳ್ಳಲು ಬಯಸಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ
ಫೆಬ್ರವರಿ 9 ರಂದು ಆರೋಪಿಯು ನನ್ನನ್ನು ದಾಬ್ರಾ ಚೌಕ್ ಬಳಿಯ ಹೋಟೆಲ್‍ಗೆ ಕರೆಸಿಕೊಂಡು ತಂಪು ಪಾನೀಯವನ್ನು ಮತ್ತು ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಮರುಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಈ ವೇಳೆ ನಾನು ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಅವರ ಆಕ್ಷೇಪಾರ್ಹ ವೀಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ
ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಸುಖಜಿತ್ ತಿಳಿಸಿದ್ದಾರೆ.