ಕರೆಂಟ್ ಶಾಕ್ ನೀಡಿ ಮಾವನ ಕೊಲೆ – ಗಾಯ ಮರೆಮಾಚಲು ರೋಸ್ ವಾಟರ್, ಅರಶಿಣ ಪುಡಿ ಹಚ್ಚಿದ ಸೊಸೆ

Public TV
2 Min Read

– ಅಪಘಾತದಿಂದ ಸಾವು ಎಂದು ಬಿಂಬಿಸಿದ್ದ ಹಂತಕಿ, ಪ್ರಿಯಕರ ಅರೆಸ್ಟ್

ರಾಯ್ಪುರ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಕರೆಂಟ್ ಶಾಕ್ ನೀಡಿ ಮಾವನನ್ನು (Father-in-law) ಹತ್ಯೆ ಮಾಡಿ, ಬಳಿಕ ಗಾಯವನ್ನು ಮರೆಮಾಚಲು ಅರಶಿಣ ಪುಡಿ ಹಚ್ಚಿರುವ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ.

ಮನೋಹರ್ ನಿರ್ಮಲ್ಕರ್ (60) ಕೊಲೆಯಾದ ಮಾವ. ಸೊಸೆ ಗೀತಾ ನಿರ್ಮಲ್ಕರ್ ಮತ್ತು ಆಕೆಯ ಪ್ರಿಯಕರ (Lover) ಲೇಖ್ರಾಮ್ ನಿಶಾದ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಜಲಂಧರ್‌ನಲ್ಲಿ ನೆರವೇರಿತು ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರನ ಅಂತ್ಯಕ್ರಿಯೆ


ಆರೋಪಿ ಗೀತಾಳಿಗೆ ಹಾಗೂ ಮಾವ ಮನೋಹರ್ ನಡುವೆ ಪ್ರತಿನಿತ್ಯವೂ ಜಗಳವಾಡುತ್ತಿದ್ದರು. ಇಬ್ಬರಿಗೂ ಸರಿ ಹೊಂದುತಿರಲಿಲ್ಲ. ಹೀಗಾಗಿ ಗೀತಾ, ಪ್ರಿಯಕರನೊಂದಿಗೆ ಸೇರಿ ಮಾವನ ಕೊಲೆಗೆ ಮಾಸ್ಟರ್ ಪ್ಯಾನ್ ಮಾಡಿದ್ದಳು. ಇದನ್ನೂ ಓದಿ: ಕಾರವಾರ | ಕಾರಿನ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಸಾವು

ಮನೋಹರ್ ರಾತ್ರಿ ನಿದ್ರೆಗೆ ಜಾರಿದ್ದ ವೇಳೆ ಗೀತಾ ಹಾಗೂ ಪ್ರಿಯಕರ ಸೇರಿ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದರು. ಈ ವೇಳೆ ಕೊಲೆ ಮಾಡಿದ್ದು ತಾನೇ ಎಂದು ತಿಳಿಯಬಾರೆಂದು ತಲೆ ಉಪಯೋಗಿಸಿದ್ದ ಗೀತಾ, ಕೈಗೆ ಎಲೆಕ್ಟಿçಷಿಯನ್‌ಗಳು ಧರಿಸುವ ಗ್ಲೌಸ್ ಅನ್ನು ಧರಿಸಿ ಕರೆಂಟ್ ಶಾಕ್ ನೀಡಿದ್ದಳು.

ಬಳಿಕ ಕುಟುಂಬಸ್ಥರ ಬಳಿ ಕುಡಿದ ಮತ್ತಿನಲ್ಲಿ ಬೈಕ್‌ನಿಂದ ಬಿದ್ದು ಮಾವ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಳು. ಅಂತ್ಯಕ್ರಿಯೆಯ ವೇಳೆ ಮನೋಹರ್ ಮೈ ಮೇಲಿನ ಗಾಯಗಳನ್ನು ಕುಟುಂಬಸ್ಥರು ಗಮನಿಸಿದ್ದರು. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ

ಸ್ಥಳಕ್ಕಾಗಮಿಸಿದ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ಮಾಡಿದ್ದರು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ದೃಢಪಡಿಸಿದರು. ಬಳಿಕ ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ ಕೊಲೆಯ ಕುರುಹು ಸಿಗಬಾರದೆಂದು ಗಾಯವಾದ ಭಾಗಗಳಿಗೆ ಅರಶಿಣ ಹಾಗೂ ರೋಸ್ ವಾಟರ್ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾಳೆ.

ಸದ್ಯ ಪೊಲೀಸರು ಕೊಲೆ ಆರೋಪಿಗಳಾದ ಗೀತಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

Share This Article