ಜಾತಿ ಬೇರೆ ಅಂತ ಯುವಕನ ಕೊಲೆ; ಲವ್ವರ್‌ ಮೃತದೇಹವನ್ನೇ ಮದುವೆಯಾದ ಯುವತಿ

1 Min Read

ಮುಂಬೈ: ಮಹಾರಾಷ್ಟ್ರದ (Maharashtra) ನಾಂದೇಡ್‌ನಲ್ಲಿ ತನ್ನ ಮನೆಯವರಿಂದ ಹತ್ಯೆಯಾದ ಪ್ರಿಯಕರನ ಮೃತದೇಹವನ್ನೇ ಯುವತಿ ಮದುವೆಯಾಗಿರುವ ಘಟನೆ ನಡೆದಿದೆ.

ಸಕ್ಷಮ್‌ ಟೇಟ್‌ ಕೊಲೆಯಾದ ಯುವಕ. ಆತನನ್ನು ಪ್ರೀತಿಸುತ್ತಿದ್ದ ಆಂಚಲ್‌ ಈಗ ಅತ್ತೆ ಮನೆ ಸೇರಿದ್ದಾಳೆ. ಪ್ರಿಯಕರನ ಮೃತದೇಹವನ್ನೇ ವರಿಸಿದ ಯುವತಿ ತನ್ನ ಕುಟುಂಬವನ್ನು ತೊರೆದಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಎರಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ; 11 ಮಂದಿ ಸಾವು

ಆಂಚಲ್ ತನ್ನ ಸಹೋದರರ ಮೂಲಕ ಸಕ್ಷಮ್ ಟೇಟ್‌ನನ್ನು ಭೇಟಿಯಾದಳು. ಆಗಾಗ್ಗೆ ಆತನ ಮನೆಗೆ ಭೇಟಿ ನೀಡುತ್ತಿದ್ದಳು. ಇಬ್ಬರ ನಡುವೆ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತು. 3 ವರ್ಷ ಪ್ರೀತಿಯಲ್ಲಿದ್ದ ಜೋಡಿಯ ಮದುವೆಗೆ ಹುಡುಗಿಯ ಮನೆಯವರ ವಿರೋಧವಿತ್ತು. ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ಇಬ್ಬರ ಮದುವೆಗೆ ಹುಡುಗಿ ಕಡೆಯವರು ನಿರಾಕರಿಸಿದ್ದರು.

ಆಕೆಯನ್ನು ಮರೆತುಬಿಡುವಂತೆ ಹುಡುಗನಿಗೆ ಬೆದರಿಕೆ ಹಾಕಿದ್ದರು. ಆದರೆ, ಅವರಿಬ್ಬರು ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು. ಇದರಿಂದ ಸಿಟ್ಟಾದ ಹುಡುಗಿ ಮನೆಯವರು, ಯುವಕನನ್ನು ಥಳಿಸಿ ಗುಂಡು ಹಾರಿಸಿ ಹತ್ಯೆ ಮಾಡಿದರು.

ಇದರಿಂದ ಮನನೊಂದ ಯುವತಿ, ಸಕ್ಷಮ್‌ ಅಂತ್ಯಕ್ರಿಯೆ ವೇಳೆ ಆತನ ಹಣೆಯ ಮೇಲೆ ತಿಲಕ ಇಟ್ಟು ಮದುವೆಯಾಗಿದ್ದಾಳೆ. ನಾನು ಇನ್ಮುಂದೆ ಸಕ್ಷಮ್‌ ಮನೆಯಲ್ಲಿ ಸೊಸೆಯಾಗಿ ವಾಸಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದಾಳೆ. ಇದನ್ನೂ ಓದಿ: Gadag | ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೂಸೈಡ್

ಪೊಲೀಸರು ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

Share This Article