ಗಾಂಧಿನಗರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಹಿನ್ನೆಲೆ ಗುಜರಾತಿನ ವಲ್ಸಾದ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ ವೇದಿಕೆಯಲ್ಲೇ ಮಹಿಳೆಯೊಬ್ಬರು ಮುತ್ತು ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಅಜ್ಮೀರ್ ದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನನ್ನನ್ನು ದ್ವೇಸಿಸುತ್ತಾರೆ. ಈ ದ್ವೇಷವನ್ನು ಶಮನ ಮಾಡುವುದಕ್ಕಾಗಿ ಒಂದು ಸಾರಿ ಲೋಕಸಭೆಯಲ್ಲಿಯೇ ಅವರನ್ನು ತಬ್ಬಿಕೊಂಡಿದ್ದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ. ಆದ್ರೆ ಬಿಜೆಪಿಯನ್ನು ಶಮನ ಮಾಡೋದು ನಮ್ಮ ಉದ್ದೇಶ ಅಲ್ಲ ಎಂದು ಹೇಳುವ ಮೂಲಕ ಕಮಲ ನಾಯಕರ ‘ಕಾಂಗ್ರೆಸ್ ಮುಕ್ತ ಭಾರತ’ ಹೇಳಿಕೆಗೆ ತಿರುಗೇಟು ನೀಡಿದರು.
2019ರ ಚುನಾವಣೆ ಸಿದ್ಧಾಂತಗಳ ನಡುವಿನ ಸ್ಪರ್ಧೆಯಾಗಿದೆ. ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಸಿದ್ಧಾಂತಗಳು ದೇಶವನ್ನು ಇಬ್ಭಾಗಗೊಳಿಸುತ್ತಿವೆ. ಕಾಂಗ್ರೆಸ್ ಭಾರತವನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಗೆ ಭಾರತ ಕೇವಲ ಒಂದು ಉತ್ಪನ್ನ. ಕಾಂಗ್ರೆಸ್ ಭಾರತವನ್ನು ಜನರು ವಾಸಿಸುವ ಸಮುದ್ರದಂತೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಕಾರ್ಯಕರ್ತೆ ಸಾರ್ವಜನಿಕ ಸಮಾರಂಭದಲ್ಲಿ ಮುತ್ತು ನೀಡಿದ್ದರು. ಘಟನೆ ಬಳಿಕ ಮಹಿಳೆ ಸಿದ್ದರಾಮಯ್ಯನವ್ರು ನಮ್ಮ ನೆಚ್ಚಿನ ನಾಯಕ. ಅದಕ್ಕಿಂತಲೂ ನಮ್ಮ ತಂದೆಯ ಸ್ಥಾನದಲ್ಲಿದ್ದಾರೆ. ಗೌರವ ಭಾವನೆಯಿಂದ ಸಿದ್ದರಾಮಯ್ಯನವರಿಗೆ ಮುತ್ತು ನೀಡಿದ್ದೇನೆ ಎಂದು ಹೇಳಿದ್ದರು.
#WATCH A woman kisses Congress President Rahul Gandhi during a rally in Valsad, #Gujarat pic.twitter.com/RqIviTAvZ9
— ANI (@ANI) February 14, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv