ಮೊದ್ಲ ಪತ್ನಿಯ ಮಕ್ಕಳು, ಪ್ರಿಯಕರನ ಸಹಾಯದಿಂದ 3ನೇ ಪತ್ನಿಯನ್ನ ಕೊಂದ 2ನೇ ಹೆಂಡ್ತಿ

Public TV
2 Min Read

ಮುಂಬೈ: 32 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಮೊದಲನೇ ಪತ್ನಿಯ ಇಬ್ಬರು ಮಕ್ಕಳ ಸಹಾಯದಿಂದ ಮೂರನೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಯೋಗಿತಾ ದೇವ್ರೆ (35) ಎಂದು ಗುರುತಿಸಲಾಗಿದೆ. ಈಕೆಯ ಶವ ಮಾರ್ಚ್ 1 ರಂದು ಮುಂಬೈನ ನೆಲ್ಲಸೋಪಾರದ ಮಾಲ್ ಬಳಿ ಹೊದಿಕೆಯೊಂದರಲ್ಲಿ ಸುತ್ತುವರಿದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಈ ಬಗ್ಗೆ ಪೊಲೀಸರು ತನಿಖೆ ಮಾಡಿದ್ದಾರೆ. ಆರೋಪಿಯನ್ನು ಪಾರ್ವತಿ ಮಾನೆ ಎಂದು ಗುರುತಿಸಲಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?
ಆರೋಪಿ ಪಾರ್ವತಿ, ಸುಶೀಲ್ ಮಿಶ್ರಾ(45)ರ ಎರಡನೇ ಪತ್ನಿ. ಈತ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿ ತನ್ನ ಮಕ್ಕಳೊಂದಿಗೆ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಆದರೆ ಎರಡು ಮದುವೆಯಾಗಿದ್ದರು ಸುಶೀಲ್ ಒಂದು ವರ್ಷದ ಹಿಂದೆ ಮೂರನೇ ವಿವಾಹನಾಗಿದ್ದನು. ಮದುವೆಯಾದ ಕೆಲ ದಿನಗಳ ಬಳಿಕ ಸುಶೀಲ್ ತನ್ನ ಮೊದಲ ಪತ್ನಿ ಮಕ್ಕಳು ಮತ್ತು ಎರಡನೇ ಪತ್ನಿಯನ್ನು ಬಿಟ್ಟು ಮೂರನೆಯ ಪತ್ನಿ ದೇವ್ರೆ ಜೊತೆ ನೆಲ್ಲಸೋಪಾರದಲ್ಲಿ ವಾಸಿಸುತ್ತಿದ್ದನು.

ಮೂರನೇ ಮದುವೆಯಾದ ನಂತರ ಸುಶೀಲ್, ನಮಗೆ ಹಾಗೂ ಮೊದಲ ಪತ್ನಿಯ ಮಕ್ಕಳಿಗೆ ಆರ್ಥಿಕ ಬೆಂಬಲವನ್ನು ನೀಡುತ್ತಿರಲಿಲ್ಲ. ಅಷ್ಟೇ ಅಲ್ಲದೆ ನನ್ನ ಜೊತೆ ದೈಹಿಕ ಸಂಬಂಧವನ್ನು ಹೊಂದುತ್ತಿರಲಿಲ್ಲ. ಜೊತೆಗೆ ಮೂರನೇ ಪತ್ನಿಯ ಎದುರು ನನ್ನನ್ನು ಅವಮಾನಿಸಿದ್ದನು ಎಂದು ಆರೋಪಿ ಪಾರ್ವತಿ ಹೇಳಿದ್ದಾಳೆ. ಈ ಎಲ್ಲ ಘಟನೆಯಿಂದ ಪಾರ್ವತಿ ಮೂರನೇ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾಳೆ. ಇದಕ್ಕೆ ಮೊದಲ ಪತ್ನಿ ಮಕ್ಕಳು ಮತ್ತು ಅವರ ಪ್ರಿಯಕರನ ಸಹಾಯ ಪಡೆದುಕೊಂಡಿದ್ದಾಳೆ.

ಕೊಲೆ:
ಶುಕ್ರವಾರ ಸುಶೀಲ್ ಮದುವೆಗೆಂದು ಅಹಮದಾಬಾದ್‍ಗೆ ಹೋಗಿದ್ದನು. ಈ ವೇಳೆ ಪಾರ್ವತಿ ಮತ್ತು ಮೊದಲ ಪತ್ನಿ ಮಕ್ಕಳು ಸೆಕ್ಯೂರಿಟಿ ಗಾರ್ಡ್ ಗೆ ಮದ್ಯ ಕುಡಿಸಿ ನಕಲಿ ಕೀ ತೆಗೆದುಕೊಂಡು ಪ್ಲ್ಯಾಟ್ ಗೆ ಹೋಗಿದ್ದಾರೆ. ಆಗ ರೂಮಿನಲ್ಲಿ ಮಲಗಿದ್ದ ದೇವ್ರೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಮಾಡಿದ ಬಳಿಕ ಮೊದಲ ಪತ್ನಿಯ ಮಗಳ ಪ್ರಿಯಕರ ನೀರಜ್ ಮಿಶ್ರಾಗೆ ಫೋನ್ ಮಾಡಿ ಕರೆದಿದ್ದಾಳೆ. ಆತ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಆತ ಬಳಿ ದೇವ್ರೆಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಸುಳ್ಳು ಹೇಳಿದ್ದಾರೆ. ಇತ್ತ ನೀರಜ್ ದೇವ್ರೆ ಮೃತಪಟ್ಟಿದ್ದಾಳೆ ಎಂದು ತಿಳಿಯದೆ ಆಟೋದಲ್ಲಿ ಮೃತ ದೇಹವನ್ನು ಸಾಗಿಸಲು ಸಹಾಯ ಮಾಡಿದ್ದಾನೆ.

ನಿರ್ಜನ ಪ್ರದೇಶದ ಬಳಿಕ ಆಟೋ ಹೋಗುತ್ತಿದ್ದಂತೆ ಆಟೋ ನಿಲ್ಲಿಸಿ ಆಸ್ಪತ್ರೆಯನ್ನು ಹುಡುಕಲು ಸಮಯವಾಗುತ್ತದೆ. ನೀನು ಹೋಗು ಎಂದು ಕಳುಹಿಸಿ ದೇಹವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊದಲಿಗೆ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆಟೋದಲ್ಲಿ ಮೃತದೇಹವನ್ನು ಸಾಗಿಸುತ್ತಿರುವ ದೃಶ್ಯ ಸೆರೆಯಾಗಿದೆ. ನಂತರ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯಕ್ಕೆ ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *