ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗಲು 5 ವರ್ಷದ ಮಗುವನ್ನು ಕೊಂದ ತಾಯಿ

Public TV
1 Min Read

ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ (Instagram) ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು 5 ವರ್ಷದ ಮಗುವನ್ನು ತಾಯಿ ಕೊಲೆ ಮಾಡಿರುವ ಘಟನೆ ದೆಹಲಿಯ (Delhi) ಅಶೋಕ್ ವಿಹಾರದಲ್ಲಿ ಘಟನೆ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು, ದೀಪ್ ಚಂದ್ ಬಂಧು ಆಸ್ಪತ್ರೆಗೆ ಮಗುವನ್ನು ಕರೆತರುವ ಮಾರ್ಗದಲ್ಲಿ ಮೃತಪಟ್ಟಿದೆ. ಮಗು ಹಾಗೂ ತಾಯಿಯ ಗುರುತನ್ನು ಬಹಿರಂಗಪಡಿಸಿಲ್ಲ.ಇದನ್ನೂ ಓದಿ: ಸೋತರು ತೊಡೆ ತಟ್ಟಿದ ಬಂಗಾರು ಹನುಮಂತ!

ಪೊಲೀಸರ ಮಾಹಿತಿಯ ಪ್ರಕಾರ, ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದ್ದು, ಗುರುತುಗಳು ಪತ್ತೆಯಾಗಿವೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದು, ತಾಯಿ ಸೇರಿದಂತೆ ಮಗುವಿನ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಸತ್ಯ ಬಿಚ್ಚಿಟ್ಟಿದ್ದು, ಸ್ವತಃ ತಾನೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಆಕೆಯ ಮೊದಲ ಪತಿ ಅವಳನ್ನು ಬಿಟ್ಟುಹೋಗಿದ್ದ. ಈ ಸಮಯದಲ್ಲಿ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ರಾಹುಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಅದಾದ ಬಳಿಕ ಆತನೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಮದುವೆಗಾಗಿ ದೆಹಲಿಯಲ್ಲಿರುವ ರಾಹುಲ್ ಮನೆಗೆ ತೆರಳಿದಾಗ ರಾಹುಲ್ ಮತ್ತು ಆತನ ಕುಟುಂಬದವರು ಆಕೆಗೆ ಮಗುವಿರುವ ಕಾರಣದಿಂದ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯ ಕಾರಣದಿಂದ ಕೊಂದಿರುವುದಾಗಿ ತಿಳಿಸಿದ್ದಾಳೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

Share This Article