ಚಿಕ್ಕಮಗಳೂರಲ್ಲಿ ಭಾರೀ ಮಳೆ – ಸಿಡಿಲಿಗೆ ವೃದ್ಧೆ ಬಲಿ

Public TV
1 Min Read

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಹಾಮಳೆಗೆ (Rain) ಮೊದಲ ಬಲಿಯಾಗಿದೆ. ತಾಲೂಕಿನ (Chikkamagaluru) ಕುರುಬರಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರು ಸಿಡಿಲು (Lightning) ಬಡಿದು ಸಾವನ್ನಪ್ಪಿದ್ದಾರೆ.

ಮೃತ ವೃದ್ಧೆಯನ್ನು ನಾಗಮ್ಮ (65) ಎಂದು ಗುರುತಿಸಲಾಗಿದೆ. ಬೇಲೂರು ತಾಲೂಕಿನ ಹೆಬ್ಬಾಳ ತಿಮ್ಮನಹಳ್ಳಿಯ ನಾಗಮ್ಮ, ತಮ್ಮ ಮಗಳ ಮನೆಗೆ ಶುಂಠಿ ಬಿತ್ತನೆಗೆ ಬಂದಿದ್ದರು. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂದು (ಮಾ.23) ಬೆಳಗ್ಗೆ ಅತ್ತೆ-ಮಾವನನ್ನು ಅಳಿಯನೇ ಹೋಗಿ ಕರೆದುಕೊಂಡು ಬಂದಿದ್ದರು. ಇನ್ನೂ ಹೊಲದಲ್ಲಿ ಒಟ್ಟು 12 ಜನ ಕೆಲಸ ಮಾಡುತ್ತಿದ್ದರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article