ಹೊಸ ವರ್ಷಕ್ಕೆ ಸ್ವೀಟ್‌ ಕೊಡ್ತೀನಿ ಅಂತ ಕರೆಸಿ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಮಹಿಳೆ!

1 Min Read

ಮುಂಬೈ: ಮಹಿಳೆಯೊಬ್ಬಳು (Woman) ಹೊಸ ವರ್ಷಾಚರಣೆಗೆ (New Year 2026) ಪ್ರಿಯಕರನನ್ನು (Lover) ಮನೆಗೆ ಕರೆಸಿ ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

25 ವರ್ಷದ ವಿವಾಹಿತ ಮಹಿಳೆ ತನ್ನ 44 ವರ್ಷದ ಪ್ರಿಯಕರನಿಗೆ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಇದು ಅವರ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಡಿಸೆಂಬರ್ 31 ರಂದು ಮಹಿಳೆ ತನ್ನ ಪ್ರಿಯಕರನ ಮೇಲೆ ದಾಳಿ ನಡೆಸಿದ್ದಾಳೆ. ಇದನ್ನೂ ಓದಿ: ಮಕ್ಕಳಿಗೆ ಮನೆ ಬಿಟ್ಟು ಹೋಗಿ ಎಂದ ಮಾಜಿ ವಾಯುಪಡೆ ಅಧಿಕಾರಿಗೆ ಗುಂಡಿಕ್ಕಿ ಹತ್ಯೆ

ಆರಂಭಿಕ ತನಿಖೆಯಲ್ಲಿ ಇಬ್ಬರೂ ಸಂಬಂಧಿಕರು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆ ದಾಳಿಗೊಳಗಾದವನ ಸಹೋದರಿಯ ಅತ್ತಿಗೆ ಎಂದು ತಿಳಿದು ಬಂದಿದೆ. ಇಬ್ಬರೂ ಕಳೆದ ಆರರಿಂದ ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಪ್ರಿಯಕರ, ಮಹಿಳೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಎಂದು ವರದಿಯಾಗಿದೆ.

ಡಿಸೆಂಬರ್ 31 ರಂದು ಮಹಿಳೆ ಹೊಸ ವರ್ಷಕ್ಕೆ ಸ್ವೀಟ್ ನೀಡುವ ನೆಪದಲ್ಲಿ ಅವನನ್ನು ತನ್ನ ಮನೆಗೆ ಆಹ್ವಾನಿಸಿದ್ದಳು. ಆ ಸಮಯದಲ್ಲಿ, ಮಹಿಳೆಯ ಮಕ್ಕಳು ಮನೆಯಲ್ಲಿ ಮಲಗಿದ್ದರು. ಮಹಿಳೆ ಮೊದಲು ಪ್ರಿಯಕರನ ಪ್ಯಾಂಟ್ ತೆಗೆಯಲು ಹೇಳಿ, ಅಡುಗೆ ಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕು ತಂದು, ಇದ್ದಕ್ಕಿದ್ದಂತೆ ಬಲಿಪಶುವಿನ ಖಾಸಗಿ ಅಂಗದ ಮೇಲೆ ದಾಳಿ ಮಾಡಿದ್ದಾಳೆ.

ತೀವ್ರ ಗಾಯವಾಗಿದ್ದ ವ್ಯಕ್ತಿ ಮನೆಗೆ ವಾಪಸ್‌ ಆದಾಗ, ಮಕ್ಕಳು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದುವೆ ಆಗ್ತೀನಿ ಅಂತ ನಂಬಿಸಿ ನರ್ಸಿಂಗ್‌ ವಿದ್ಯಾರ್ಥಿನಿ ಮೇಲೆ ಸರ್ಕಾರಿ ವೈದ್ಯನಿಂದ ಅತ್ಯಾಚಾರ

Share This Article