ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು

Public TV
1 Min Read

ಹೈದರಾಬಾದ್: ಪತಿಯನ್ನು ಬಚಾವ್ ಮಾಡಲು ಮಹಿಳೆ ಉತ್ತರಾಖಂಡ ಎಸ್‍ಟಿಎಫ್ ಪೊಲೀಸರಿಗೆ ಮತ್ತು ರಾಜೇಂದ್ರನಗರ ಪೊಲೀಸರ ತಂಡಕ್ಕೆ ಮೆಣಸಿನ ಕಾಯಿ ಪುಡಿ ಎರಚಿರುವ ಘಟನೆ ತೆಲಂಗಾಣದ ಅತ್ತಾಪುರದಲ್ಲಿ ನಡೆದಿದೆ.

ಸದ್ಯ ಪೊಲೀಸರ ಕರ್ತವ್ಯಕ್ಕೆ ಅಡ್ಡ ಪಡಿಸಿದ ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ)ಸೆಕ್ಷನ್ 353ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

2019 ರ ಕೊಲೆ ಪ್ರಕರಣದ ವಾಟೆಂಡ್ ಕ್ರಿಮಿನಲ್ ಆಗಿದ್ದ ಮಹಿಳೆಯ ಪತಿಯನ್ನು ಬಂಧಿಸಲು ಉತ್ತರಾಖಂಡ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಹೈದರಾಬಾದ್‍ನ ಅತ್ತಾಪುರದ ಸುಲೇಮಾನ್ ನಗರದಲ್ಲಿ ಆರೋಪಿ ವಾಸಿಂ ಪತ್ನಿಯನ್ನು ಭೇಟಿಯಾಗಿರುವ ಬಗ್ಗೆ ಪೊಲೀಸರಿ ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ಖಚಿತಪಡಿಸಿಕೊಂಡ ಉತ್ತರಾಖಂಡದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಪೊಲೀಸ್ ತಂಡದೊಂದಿಗೆ ವಾಸಿಂ ಮನೆಗೆ ತೆರಳಿದೆ. ಈ ವೇಳೆ ಅವರೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಯ ಮೂವರು ಕಾನ್‍ಸ್ಟೆಬಲ್‍ಗಳು ತೆರಳಿದ್ದರು. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

ಪೊಲೀಸರು ಕಂಡ ಕೂಡಲೇ ಮಹಿಳೆ ಎಸ್‍ಟಿಎಫ್ ಕಾನ್‍ಸ್ಟೇಬಲ್ ಚಮನ್‍ಕುಮಾರ್ ಹಾಗೂ ಸ್ಥಳೀಯ ಕಾನ್‍ಸ್ಟೇಬಲ್‍ಗಳ ಕಣ್ಣಿಗೆ ಮೆಣಸಿನ ಕಾಯಿ ಪುಡಿ ಎರಚಿ ಪತಿಗೆ ಪರಾರಿಯಾಗಲು ಸಹಾಯ ಮಾಡಿದ್ದಾಳೆ. ಅಲ್ಲದೇ ತನಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಕಿರುಚಾಡಿ ನೆರೆಹೊರೆಯವರೆಲ್ಲಾ ಬಂದು ಸೇರುವಂತೆ ದೊಂಬಿ ಎಬ್ಬಿಸಿದ್ದಾಳೆ. ಈ ಮಧ್ಯೆ ಆರೋಪಿ ವಾಸಿಂ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಟೋಕನೈಸೇಶನ್ ಜಾರಿಗೆ 6 ತಿಂಗಳ ವಿಳಂಬ

Share This Article
Leave a Comment

Leave a Reply

Your email address will not be published. Required fields are marked *