– ಬೆಂಗಳೂರಲ್ಲೊಂದು ಅಮಾನವೀಯ ಕೃತ್ಯ
ಬೆಂಗಳೂರು: ಅತ್ತೆ, ಮಾವ ಮನೆಯಿಂದ ಹೊರಹಾಕಿದ್ದಕ್ಕೆ ಕಳೆದ 20 ದಿನದಿಂದ ಮನೆಯ ಹೊರಗೆ ಮಹಿಳೆಯೊಬ್ಬರು ಬದುಕು ನಡೆಸುತ್ತಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಯಶವಂತಪುರದ (Yeshwantpur) ಬಾಬಾಸಾಹೇಬರಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಅತ್ತೆ- ಮಾವ ಸೇರಿ, ಸೊಸೆಯನ್ನೇ ಮನೆಯಿಂದ ಹೊರಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪೂಜಾ ಹಾಗೂ ರಾಘವೇಂದ್ರ ಎಂಬುವವರು 7 ವರ್ಷದ ಹಿಂದೆ ಮದುವೆಯಾಗಿದ್ದರು. ರಾಘವೇಂದ್ರ ಅವರಿಗೆ ಮೊದ್ಲಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಆದರೆ ಇದನ್ನು ಪೂಜಾ ಕುಟುಂಬಕ್ಕೆ ತಿಳಸದೇ ಹಾಗೇ ಮದುವೆ ಮಾಡಿಸಿಕೊಟ್ಟಿದ್ದರು. ಹೀಗಾಗಿ ಮೂರು ತಿಂಗಳ ಹಿಂದೆ ರಾಘವೇಂದ್ರ ಮೃತಪಟ್ಟಿದ್ದರು. ಅದಾದ ಬಳಿಕ ಪೂಜಾ ಅವರನ್ನ ಅತ್ತೆ- ಮಾವ ಹಾಗೂ ನಾದಿನಿ ಸೇರಿಕೊಂಡು ಮನೆಯಿಂದ ಬಲವಂತವಾಗಿ ಹೊರತಳ್ಳಿ, ಮನೆಯನ್ನು ಲಾಕ್ ಮಾಡಿದ್ದಾರೆ.ಇದನ್ನೂ ಓದಿ: ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಕೇಸ್ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
ಇದೀಗ ಅತ್ತೆ- ಮಾವ ಮಗಳ ಮನೆಯಲ್ಲಿದ್ದು, ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸೊಸೆ ಮಾತ್ರ ಇದು ಗಂಡನ ಮನೆ ಅಂತ ಕಳೆದ 20 ದಿನಗಳಿಂದ ಮನೆಯ ಆವರಣದಲ್ಲಿ ಪುಟ್ಟ ಸಿಲಿಂಡರ್, ಸಣ್ಣಪುಟ್ಟ ಪಾತ್ರೆ ಇಟ್ಕೊಂಡು ಬದುಕು ನಡೆಸ್ತಿದ್ದಾರೆ. ವಾರಕ್ಕೊಮ್ಮೆ ಸ್ನಾನ ಮಾಡ್ತಿದ್ದು, ಅಕ್ಕಪಕ್ಕದ ಮನೆಯವ್ರ ಶೌಚಾಲಯವನ್ನೇ ಬಳಸ್ತಿದ್ದಾರೆ. ಗಂಡ ಸತ್ತ ಮೇಲೆ ನಿನ್ನ ಅವಶ್ಯಕತೆಯಿಲ್ಲ ಇಲ್ಲಿಂದ ತೊಲಗು ಎಂದು ಪೂಜಾಗೆ, ಮಾವ ಶ್ರೀನಿವಾಸ್ ಹಾಗೂ ಅತ್ತೆ ಶಾಂತಮ್ಮ ಕಿರುಕುಳ ನೀಡಿದ್ದಾರೆ ಅಂತ ಕಣ್ಣೀರು ಹಾಕ್ತಿದ್ದಾರೆ.
ಇನ್ನೂ ಮಗಳ ಸ್ಥಿತಿ ಕಂಡು ತಾಯಿ ನಿತ್ಯ ನೋವು ಅನುಭವಿಸ್ತಿದ್ದಾರೆ. ತನ್ನ ಮಗಳನ್ನು ಒಂಟಿ ಮಾಡಿದೆ ಎಂದು ಕೊರಗುತ್ತಿದ್ದಾರೆ. ಬಡತನ ಇದ್ದರೂ ಕೂಡ ಮಗಳು ಚೆನ್ನಾಗಿರಲಿ ಎಂದು ಸಾಲ ಮಾಡಿ ಮಗಳ ಮದುವೆ ಮಾಡಿದ್ದರು. ಆದರೆ ಗಂಡನ ಮನೆಯವರು ವಿಷಯ ಮುಚ್ಚಿಟ್ಟು ಮಗಳ ಭವಿಷ್ಯವನ್ನೇ ಹಾಳು ಮಾಡಿದರು. ಸದ್ಯ ಮಹಿಳಾ ಆಯೋಗ, ಮಹಿಳಾ ಸಂಘಟನೆಗಳು ಪೂಜಾ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ :ಪ್ರೀತಿ ವಿಚಾರಕ್ಕೆ ಕಿರಿಕ್ – ಶಿಕ್ಷಕಿಗೆ ಚಾಕು ಇರಿದು ಕೊಂದ ಯುವಕ