ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

By
2 Min Read

ಬ್ಯಾಂಕಾಕ್: ಶುಕ್ರವಾರ ಸಂಭವಿಸಿದ ಭಾರೀ ಭೂಕಂಪನದಿಂದಾಗಿ (Earthquake) ಆಸ್ಪತ್ರೆ ಕಟ್ಟಡ ಧ್ವಂಸಗೊಂಡಿದ್ದರ ಪರಿಣಾಮ ಬ್ಯಾಂಕಾಕ್‌ನ (Bangkok) ರಸ್ತೆಯಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಪ್ರಸಂಗ ಕಂಡುಬಂದಿದೆ.

ಮ್ಯಾನ್ಮಾರ್‌ನಲ್ಲಿ (Myanmar) ಸಂಭವಿಸಿದ ಭಾರೀ ಭೂಕಂಪನದ ಪರಿಣಾಮ ಬ್ಯಾಂಕಾಕ್‌ನ ಆಸ್ಪತ್ರೆಗಳು ತೆರವುಗೊಂಡಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಕರೆತರುವಾಗ ಹೆರಿಗೆ ನೋವು ಶುರುವಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಸಹಾಯದಿಂದ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಸದ್ಯ ಭೂಕಂಪನದ ನಡುವೆ ತಾಯಿ ಮಗುವಿಗೆ ಜನ್ಮ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ

ಬ್ಯಾಂಕಾಕ್‌ನ ಬಿಎನ್‌ಎಚ್ ಆಸ್ಪತ್ರೆ ಮತ್ತು ಕಿಂಗ್ ಚುಲಲಾಂಗ್‌ಕಾರ್ನ್ ಸ್ಮಾರಕ ಆಸ್ಪತ್ರೆಯ ರೋಗಿಗಳನ್ನು ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಕೆಲವು ರೋಗಿಗಳನ್ನು ಸ್ಟ್ರೆಚರ್ ಹಾಗೂ ವೀಲ್‌ಚೇರ್‌ಗಳಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು, ಬೀದಿಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಎರಡು ಭಾರಿ ಭೂಕಂಪನದಿಂದಾಗಿ ಬ್ಯಾಂಕಾಕ್ ಸೇರಿದಂತೆ ಸಾವಿನ ಸಂಖ್ಯೆ 1,000 ಗಡಿ ದಾಟಿದ್ದು, 2,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ:1ನೇ ತರಗತಿಗೆ ವಯೋಮಿತಿ ಗೊಂದಲ – ಪರಿಹಾರ ಕೇಳಲು ಬಂದ ಪೋಷಕರ ವಿರುದ್ಧ ಮಧು ಬಂಗಾರಪ್ಪ ಗರಂ!

Share This Article