ಚಲಿಸುತ್ತಿದ್ದ ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Public TV
1 Min Read

ನುಷ್ಯ ಎಂದರೆ ಹುಟ್ಟು, ಸಾವು ಸಹಜ. ಹುಟ್ಟು ಸಾವು ಎರಡೂ  ಯಾವ ಕ್ಷಣದಲ್ಲಿ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.  ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಒಂದು ಘಟನೆ ನಡೆದಿದೆ. ಬಸ್​ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ  ನೀಡಿದ ಘಟನೆ ಬ್ರೆಜಿಲ್​ನ ರಿಯೋ ಡಿ ಜನೈರೋದಲ್ಲಿ ಸುದ್ದಿಯಾಗಿದೆ.

ಮಹಿಳೆಯೊಬ್ಬರು ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಗೆ ಹೆರಿಗೆ ನೋವು ಆರಂಭವಾಗುತ್ತಲೇ ಡ್ರೈವರ್​ ಬಸ್​ ಅನ್ನು ಆಸ್ಪತ್ರೆಯ ಕಡೆಗೆ ತೆಗೆದುಕೊಂಡು ಹೋಗಿದ್ದಾನೆ. ಸಿಬ್ಬಂದಿಯ ಸಹಾಯ ಪಡೆದು ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ. ಬಸ್​ನಲ್ಲಿದ್ದ ಸಹ ಪ್ರಯಾಣಿಕರು ಕೂಡ ಮಹಿಳೆಗೆ ಸಹಾಯಮಾಡಿದ್ದಾರೆ. ಇದನ್ನೂ ಓದಿ: ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

ಇನ್‌ಸ್ಟಾಗ್ರಾಮ್‌ನ ಗುಡ್​ನ್ಯೂಸ್​ ಮೂಮೆಂಟ್​ ಎನ್ನುವ​ ಪೇಜ್‌ ಈ ವೀಡಿಯೋವನ್ನು ಹಂಚಿಕೊಂಡಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆರೋಗ್ಯ ಇಲಾಖೆಯ ಹೇಳಿಕೆ ಉಲ್ಲೇಖಿಸಿ ತಾಯಿ ಮತ್ತು ಶಿಶು ಸುರಕ್ಷಿತವಾಗಿದ್ದಾರೆ ಎಂಬುದಾಗಿಯೂ ಗುಡ್​ನ್ಯೂಸ್​ ಮೂಮೆಂಟ್​ ಮಾಹಿತಿ ಹಂಚಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *