ಗ್ಯಾಂಗ್‍ರೇಪ್ ಎಸಗಿ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ರು!

Public TV
1 Min Read

ಅಲಹಾಬಾದ್: ಮಹಿಳೆಯ ಮೇಲೆ ಇಬ್ಬರೂ ಸೇರಿ ಅತ್ಯಾಚಾರ ಎಸಗಿ ಬಳಿಕ ಆಕೆಯ ಗುಪ್ತಾಂಗಕ್ಕೆ ಆಸಿಡ್ ಎರಚಿರುವ ಅಮಾನೀಯ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಘೋರ್‍ಪುರ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ಘೋರ್‍ಪುರ್‍ನ ಶಾಲೆಯೊಂದರಲ್ಲಿ ಕ್ಲೀನರ್ ಕೆಲಸವನ್ನು ಮಾಡುತ್ತಿದ್ದರು. ಆರೋಪಿಯಲ್ಲಿ ಒಬ್ಬನಾದ ಪಂಚರಾಜ್ ಎಂಬುವನೂ ಕೂಡ ಅದೇ ಶಾಲೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಅವಳು ಕೆಲ ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದೆವು. ನನಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ನಾನು ಆಕೆಯಿಂದ ದೂರವಿದ್ದೆ. ಆದರೆ ಆಕೆ ಯಾವಗಲೂ ನನ್ನ ಜೊತೆಯಲ್ಲಿಯೇ ಇರುವಂತೆ ಒತ್ತಾಯಿಸಿ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತು ಕೋಪದಿಂದ ಈ ಕೃತ್ಯ ಎಸಗಿದೆ ಎಂದು ಆರೋಪಿ ಪಂಚ್‍ರಾಜ್ ವಿಚಾರಣೆಯ ವೇಳೆ ತಿಳಿಸಿದ್ದಾನೆ.

ಶಾಲೆಗೆ ದಸರಾ ರಜೆ ಇರುವುದರಿಂದ ಯಾರು ಬರುತ್ತಿರಲಿಲ್ಲ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪಂಚರಾಜ್ ಸಂತ್ರಸ್ತೆಯನ್ನು ನಿನ್ನ ಬಳಿ ಮಾತಾಡಬೇಕು ಎಂದು ಹೇಳಿ ಶಾಲೆಗೆ ಕರೆಸಿಕೊಂಡಿದ್ದಾನೆ. ನಂತರ ಏಕಾಂತವಾಗಿ ಇರಬೇಕೆಂದು ಯಾರು ಇಲ್ಲದ ಕಡೆ ಕರೆದುಕೊಂಡು ಹೋಗಿ ಸಹಚರನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ಖಾಸಗಿ ಭಾಗಗಳಿಗೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸದ್ಯಕ್ಕೆ ಸಂತ್ರೆಸ್ತೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದಾರೆ. ಆದರೆ ಆಕೆಯ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಆಕೆಯ ಪತಿ ಸಾವನ್ನಪ್ಪಿದ್ದಾರೆ ಹಾಗೂ ಆಕೆಯ ಮಕ್ಕಳ ಬಗ್ಗೆನೂ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *