ಮಹಿಳೆಯರ ವಾಶ್‍ರೂಮ್‍ನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟಿದ್ದ ಕಾಮುಕ ಅರೆಸ್ಟ್!

Public TV
1 Min Read

ಬೆಂಗಳೂರು: ಕಾಫಿ ಶಾಪ್‍ನ ವಾಶ್ ರೂಮ್‍ನಲ್ಲಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಮೂಲದ ಮನೋಜ್ (23) ಎಂದು ಗುರುತಿಸಲಾಗಿದೆ. ಆರೋಪಿ ಕಾಫಿ ಶಾಪ್‍ನಲ್ಲಿ ಕಾಫಿ ಮೇಕರ್ ಆಗಿದ್ದ. ಪ್ರಕರಣ ಸಂಬಂಧ ಕ್ಷಮೆ ಕೇಳಿಸಿ ಆತನನ್ನು ವಜಾ ಮಾಡಲಾಗಿತ್ತು.

ಬಿಇಎಲ್ ರಸ್ತೆಯಲ್ಲಿರೋ ಥರ್ಡ್ ವೇವ್ ಕೆಫೆಯ ವಾಶ್ ರೂಮ್‍ನ ಕಸದ ಡಬ್ಬದಲ್ಲಿ ಸಣ್ಣನೆಯ ರಂಧ್ರ ಮಾಡಿ ಆರೋಪಿ ಮೊಬೈಲ್ ಇಟ್ಟಿದ್ದ. ಫ್ಲೈಟ್ ಮೋಡ್‍ನಲ್ಲಿಟ್ಟು ರೆಕಾಡಿರ್ಂಗ್ ಆನ್ ಮಾಡಿಟ್ಟಿದ್ದ. ಮಹಿಳೆಯೊಬ್ಬರು ವಾಶ್ ರೂಮ್‍ಗೆ ಹೋದಾಗ ಮೊಬೈಲ್ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article