– ಮಗನನ್ನು ಕೊಂದು ಹೃದಯಾಘಾತದಿಂದ ಮೃತಪಟ್ಟ ಅಂತ ಬಿಂಬಿಸಿದ್ಳು
ಮುಂಬೈ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಅಂತ ಪ್ರಿಯಕರನ ಜೊತೆ ಸೇರಿಕೊಂಡು ಹೆತ್ತ ಮಗನನ್ನೇ ತಾಯಿ ಹತ್ಯೆ ಮಾಡಿರುವ ಘಟನೆ ಪುಣೆಯಲ್ಲಿ (Pune) ನಡೆದಿದೆ.
ಪ್ರಿಯಕರನ ಜೊತೆ ಸೇರಿಕೊಂಡು ವಿವಾಹಿತ ಮಹಿಳೆ ತನ್ನ ಆರು ವರ್ಷದ ಮಗನನ್ನು ಹತ್ಯೆ ಮಾಡಿದ್ದಾಳೆ. ನೀರು ತುಂಬಿದ ಬಕೆಟ್ನಲ್ಲಿ ಮಗನ ತಲೆ ಮುಳುಗಿಸಿ ಕೊಲೆ ಮಾಡಿದ್ದಾಳೆ. ಮಗ ಸತ್ತಿದ್ದಾನೋ ಇಲ್ಲವೋ ಅಂತ ತಿಳಿಯಲು ದೇಹವನ್ನು ನೆಲಕ್ಕೆ ಬಡಿದಿದ್ದಾಳೆ. ಕೊನೆಗೆ ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಬಿಂಬಿಸಿದ್ದಳು.
ಪುಣೆ ಜಿಲ್ಲೆಯ ಖೇಡ್ ನಿವಾಸಿಯಾದ 27 ವರ್ಷದ ಬೈಸ್ರಾನ್ ಮೆಹಬೂಬ್ ಶೇಖ್, 10 ವರ್ಷಗಳ ಕಾಲ ತನ್ನ ಪತಿ ಮೆಹಬೂಬ್ನಿಂದ ದೂರವಾಗಿದ್ದಳು. ಸ್ನೇಹಿತ ರಾಮ್ ವಿನಾಯಕ್ ಕಜೆವಾಡ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೊಲೆ ಕೇಸ್ – ದೆಹಲಿ ಏರ್ಪೋರ್ಟ್ನಲ್ಲಿ ಆರೋಪಿ ಬಂಧನ
ಮಹಬೂಬ್ ಮತ್ತು ಬೈಸ್ರಾನ್ ದಂಪತಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಇಬ್ಬರು ತಮ್ಮ ತಂದೆಯೊಂದಿಗೆ ವಾಸಿಸುತ್ತಿದ್ದರೆ. ಅವರ ಆರು ವರ್ಷದ ಮಗ ಅವೇಜ್ ತನ್ನ ತಾಯಿಯ ಆರೈಕೆಯಲ್ಲಿದ್ದ. ರಾಮ್ ಮತ್ತು ಬೈಸ್ರಾನ್ ತಮ್ಮ ಸಂಬಂಧಕ್ಕೆ ಅವೇಜ್ ಅಡ್ಡಿ ಬರುತ್ತಿದ್ದಾನೆಂದು ಹತ್ಯೆ ಮಾಡಲು ನಿರ್ಧರಿಸಿದ್ದರು. ರಾತ್ರಿ 11:30 ರ ಸುಮಾರಿಗೆ ಬಾಲಕನ ಕೊಲೆ ಮಾಡಿದ್ದಾರೆ.
ಮಗ ಶವವನ್ನು ಬೈಸ್ರಾನ್ ತನ್ನ ಹೆತ್ತವರ ಮನೆಗೆ ತೆಗೆದುಕೊಂಡು ಹೋಗಿ, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾಳೆ. ಬಾಲಕನ ತಂದೆಯ ಅಜ್ಜ ಅಂತ್ಯಕ್ರಿಯೆಗಾಗಿ ಮನೆಗೆ ಹೋದಾಗ, ದೇಹದ ಮೇಲೆ ಹಲ್ಲೆಯ ಗುರುತುಗಳನ್ನು ಗಮನಿಸಿದ್ದರು. ತಕ್ಷಣ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೊಲೆ ನಡೆದಿರುವುದು ದೃಢಪಟ್ಟಿದೆ. ಬೈಸ್ರಾನ್ಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

