ಮಹಿಳೆ ಅನುಮಾನಾಸ್ಪದ ಸಾವು – ಪತಿಯ ಅಕ್ರಮ ಸಂಬಂಧದಿಂದ ಕೊಲೆ ಆರೋಪ

By
1 Min Read

ಬೆಂಗಳೂರು: ನಗರದ ಆಡುಗೋಡಿಯ (Adugodi) ನಂಜಪ್ಪ ಲೇಔಟ್‍ನಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪತಿಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಮೃತ ಮಹಿಳೆಯನ್ನು ಹೇಮಾ (44) ಎಂದು ಗುರುತಿಸಲಾಗಿದೆ. ಪತಿಗೆ ಅಕ್ರಮ ಸಂಬಂಧ ಇದೆ, ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದ ಎಂದು ಮಹಿಳೆ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳಂತೆ. ಇನ್ನೂ ಜನವರಿಯಲ್ಲಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಳಂತೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ

ಕಳೆದ ಶನಿವಾರ ಹೇಮಾ ಸಾವನ್ನಪ್ಪಿದ್ದು, ಮಗಳ ವಿದ್ಯಾಭ್ಯಾಸದ ವಿಚಾರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡ ಹೇಳಿದ್ದ. ಆದರೆ ಹೇಮಾ ನೇಣು ಬಿಗಿದ ಸ್ಥಿತಿಯಲ್ಲಿರೋದನ್ನು ಯಾರು ನೋಡಿಲ್ಲ. ಹೇಮಾ ಮೃತದೇಹವನ್ನು ಆಸ್ಪತ್ರೆಯಲ್ಲಿ ನೋಡಿರೋ ಕುಟುಂಬಸ್ಥರು ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಮಹಿಳೆಯ ಮಗಳು ರಷ್ಯಾದಿಂದ ಸೋಮವಾರ ವಾಪಸ್ ಆದ ಹಿನ್ನೆಲೆ, ಆಡುಗೋಡಿ ಶವಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.

ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ

Share This Article