JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌; ಕದ್ರಾ ಠಾಣೆ PSI ಅಮಾನತು

1 Min Read

ಕಾರವಾರ: ಕಾರವಾರದ (Karwar) ಕದ್ರಾ (Kadra) ನಿವಾಸಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಕದ್ರಾ ಠಾಣೆ ಪಿಎಸ್‌ಐ ಅಮಾನತುಗೊಂಡಿದ್ದಾರೆ.

ರೀನಾ ಹಾಗೂ ಕ್ರಿಸ್ತೋದ್ ಡಿಸೋಜಾ ಪುತ್ರಿ ರಿಶೇಲ್ ಡಿಸೋಜಾ‌ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣದ ಪ್ರಾಥಮಿಕ ಹಂತದಲ್ಲೇ ನಿಷ್ಕಾಳಜಿ, ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾದ ಹಿನ್ನೆಲೆ ಕದ್ರಾ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಬಂಡಿವಡ್ಡರ್ ಅಮಾನತಾಗಿದ್ದಾರೆ. ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌ – ಆರೋಪಿ ಎಸ್ಕೇಪ್‌

ರಿಶೇಲ್ ಕುಟುಂಬಸ್ಥರು ಹಾಗೂ ಸಮುದಾಯದ ಜನರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಸಮುದಾಯ ಹಾಗೂ ರಾಜಕೀಯ ಒತ್ತಡದ ಹಿನ್ನೆಲೆ ಕದ್ರಾ ಪಿಎಸ್‌ಐ ಸಸ್ಪೆಂಡ್ ಆಗಿದ್ದಾರೆ.

ಜೆಡಿಎಸ್ ಮುಖಂಡೆಯೊಬ್ಬರ ಪುತ್ರ ಚಿರಾಗ್ ಕಾಟದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಮಾಡಲಾಗಿತ್ತು. ಪ್ರೀತಿಸುವಂತೆ ಕಾಟ ನೀಡಿದ್ದಲ್ಲದೇ ಯುವತಿಯನ್ನು ರೇಪ್ ಮಾಡಿದ್ದಾರೆಂದು ಆರೋಪಿಸಿ ಯುವತಿ ಕುಟುಂಬ ದೂರು ನೀಡಿತ್ತು. ಅತ್ಯಾಚಾರವಾಗಿರೋ ಸಂಶಯದ ಮೇರೆಗೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ಒತ್ತಾಯಿಸಿದ್ದರು. ಇದನ್ನೂ ಓದಿ: ಪ್ರೀತಿ ಹೆಸರಲ್ಲಿ JDS ಮುಖಂಡೆ ಪುತ್ರನಿಂದ ಕಿರುಕುಳ – ಯುವತಿ ಆತ್ಮಹತ್ಯೆ

Share This Article