ಕಾರವಾರ: ಜಿಲ್ಲಾಸ್ಪತ್ರೆಯ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಬೃಹದಾಕಾರದ ಮರವೊಂದು ಉರುಳಿ ಬಿದ್ದ (Tree Fall) ಪರಿಣಾಮ ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಕಾರವಾರ (Karwar) ನಗರದ ಪಿಕಳೆ ರಸ್ತೆಯಲ್ಲಿ ನಡೆದಿದೆ.
ಮಲ್ಲಾಪುರ (Mallapura) ಮೂಲದ ಲಕ್ಷ್ಮೀ ನಾರಾಯಣ ಮಮ್ತೆಕರ (55) ಮೃತ ದುರ್ದೈವಿ. ಮಹಿಳೆಯು ಮಲ್ಲಾಪುರದಿಂದ ಕಾರವಾರ ಜಿಲ್ಲಾಸ್ಪತ್ರೆಗೆ ಗರ್ಭಿಣಿ ಸೊಸೆಯ ತಪಾಸಣೆಗೆ ಬಂದಿದ್ದರು. ಇದನ್ನೂ ಓದಿ: ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ
ಸೊಸೆ ಆಸ್ಪತ್ರೆಗೆ ಹೋಗಿದ್ದ ವೇಳೆ ಕಾರಿನಲ್ಲಿದ್ದ ಮಹಿಳೆ ಮೇಲೆ ಬೃಹದಾಕಾರದ ಮರವೊಂದು ಬುಡ ಸಮೇತ ಉರುಳಿ ಬಿದ್ದಿದ್ದೆ. ಪರಿಣಾಮ ಕಾರಿನಡಿ ಸಿಲುಕಿದ್ದ ಮಹಿಳೆ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಇದನ್ನೂ ಓದಿ: ಬೈಕ್‌ನಲ್ಲಿ ಬಿಯರ್ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರಿನ ಮೇಲೆ ಬಿದ್ದ ಮರ ತೆಗೆಯಲು ಹರಸಾಹಸಪಟ್ಟರು. ಕಾರವಾರ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.