ಬೆಂಗಳೂರು: ನೆಲಮಂಗಲ ಪಟ್ಟಣದ ಲೋಹಿತ್‍ನಗರದಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದು ಕೆಳಗಿಳಿಸಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಮುತ್ತುರಾಣಿ (30) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮೃತ ಮಹಿಳೆ. ಪತಿ ಓಂಕಾರ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಶುಕ್ರವಾರ ರಾತ್ರಿಯೇ ಮುತ್ತುರಾಣಿ ಮೃತಪಟ್ಟಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಈ ದಂಪತಿ ತುಮಕೂರು ಪಾವಗಡ ಮೂಲದವರು ಎಂದು ತಿಳಿದು ಬಂದಿದೆ.
ಪತಿ ಓಂಕಾರ್ ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ನನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದನು. ಈ ಬಗ್ಗೆ ರಾಜಿ ಪಂಚಾಯಿತಿ ಕೂಡ ಮಾಡಿಸಿದ್ದೇವೆ. ಆದರೂ ಕುಡಿದು ಶುಕ್ರವಾರ ರಾತ್ರಿ ಜಗಳ ಮಾಡಿ ನನ್ನ ಮಗಳನ್ನು ಅವನೇ ಕೊಲೆ ಮಾಡಿದ್ದಾನೆ. ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ ಎಂದು ಮೃತ ಮುತ್ತುರಾಣಿ ತಂದೆ ಆರೋಪಿಸುತ್ತಿದ್ದಾರೆ.
ಸದ್ಯಕ್ಕೆ ಪತಿ ಓಂಕಾರ್ ನನ್ನು ನೆಲಮಂಗಲ ಪಟ್ಟಣ ಪೊಲೀಸರ ವಶಕ್ಕೆ ಪಡೆದಿದ್ದು, ಈ ಕುರಿತು ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv