ಚಿಕ್ಕಮಗಳೂರು: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಮಚ್ಚು ಹಿಡಿದು ಹತ್ತಿರ ಬಂದ್ರೆ ತಲೆ ಕಡಿಯುತ್ತೇನೆಂದು ಬಸ್ ನಿಲ್ದಾಣದಲ್ಲಿ ಅವಾಂತರ ಸೃಷ್ಠಿಸಿರುವ ಘಟನೆ ಚಿಕ್ಕಮಗಳೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಭಾನುವಾರ ರಾತ್ರಿ 11.30ಕ್ಕೆ ಬಸ್ ನಿಲ್ದಾಣಕ್ಕೆ ಬಂದ ಮೂಡಿಗೆರೆ ಮೂಲದ ಮಾನಸಿಕ ಅಸ್ವಸ್ಥ ಮಹಿಳೆ ಮಚ್ಚು ಹಿಡಿದು ಬಸ್ ನಿಲ್ದಾಣದಲ್ಲಿ ಕೂಗಾಡಿದ್ದಾಳೆ. ಇದರಿಂದ ಬಸ್ ಸ್ಟ್ಯಾಂಡ್‍ನಲ್ಲಿದ್ದ ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ಆತಂಕಕ್ಕೀಡಾಗಿದ್ದರು. ಕೂಡಲೇ ಸ್ಥಳಕ್ಕೆ ಬಂದ ನಗರ ಠಾಣಾ ಪೊಲೀಸರು ಆಕೆ ಕೈಯಿಂದ ಮಚ್ಚನ್ನು ಕಿತ್ತುಕೊಂಡಿದ್ದಾರೆ. ಮಹಿಳೆ ಕೂಗಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.
ಮಹಿಳೆ ಕಳೆದ ಒಂದು ತಿಂಗಳ ಹಿಂದೆ ಚಿಕ್ಕ ಮಗುವನ್ನಿಟ್ಟುಕೊಂಡು ರಸ್ತೆಯಲ್ಲೇ ಹೊಡೆದು, ಧರಧರನೇ ಎಳೆದಾಡುತ್ತಿದ್ದಳು. ಇದನ್ನು ಕಂಡ ನಗರ ಠಾಣಾ ಪೊಲೀಸರು ಮಗುವನ್ನು ಮಕ್ಕಳ ಸಲಹಾ ಕೇಂದ್ರಕ್ಕೆ ಒಪ್ಪಿಸಿ ಈಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಮಹಿಳೆ ಅಲ್ಲಿಂದಲೂ ಪರಾರಿಯಾಗಿದ್ದಾಳೆ. ಸದ್ಯ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv