ಚಾಮರಾಜನಗರ: ಗೌರಿ-ಗಣೇಶ ಹಬ್ಬಕ್ಕೆ (Ganesh Chaturthi) ತವರು ಮನೆಗೆ ಕರೆಯಲು ಯಾರು ಇಲ್ಲವೆಂದು ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ (Kollegala) ತಾಲೂಕಿನ ಮಧುವನಹಳ್ಳಿ ಗ್ರಾಮದ ಆರುವನಪುರ ಬಡಾವಣೆಯಲ್ಲಿ ನಡೆದಿದೆ.
ಆರುವನಪುರ ಬಡಾವಣೆಯ ಸಿದ್ದರಾಜು ಎನ್ನುವವರ ಪತ್ನಿ ರಶ್ಮಿ(32) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಚಿಕ್ಕಬಳ್ಳಾಪುರ: ಗೌರಿ-ಗಣೇಶ ಹಬ್ಬದಂದೇ ವಿದ್ಯುತ್ ಶಾಕ್‌ಗೆ ತಾಯಿ, ಮಲಮಗ ಸಾವು
ರಶ್ಮಿ ಅವರ ತಂದೆ, ತಾಯಿ ಹಾಗೂ ಅಣ್ಣ ಈ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಈ ಬಾರಿಯ ಹಬ್ಬಕ್ಕೆ ಕರೆದು ಅರಿಶಿಣ-ಕುಂಕುಮ ನೀಡಲು ಯಾರಿಲ್ಲವೆಂದು ಮನನೊಂದಿದ್ದರು. ಹಬ್ಬದ ಹಿನ್ನೆಲೆ ಇಂದು ಪತಿ ಮನೆಯಲ್ಲಿ ಗಣೇಶನಿಗೆ ಪೂಜೆ ಮಾಡಲು ರಶ್ಮಿ ಎಲ್ಲಾ ತಯಾರಿಯನ್ನು ಸಹ ಮಾಡಿಕೊಂಡಿದ್ದರು. ಆದರೆ ತವರಿನವರಿಲ್ಲ ಎಂದು ಮನನೊಂದಿದ್ದ ರಶ್ಮಿ, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ತವರು ಮನೆಯಲ್ಲಿ ರಾಧಿಕಾ ಪಂಡಿತ್ ಗೌರಿ-ಗಣೇಶ ಹಬ್ಬ; ಕೊಂಕಣಿ ಖಾದ್ಯದ ಲಿಸ್ಟ್ ಅಬ್ಬಬ್ಬಾ!
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಪತಿ ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.