ತುಮಕೂರು: ನಗರದ ಗೋಕುಲ ಬಡವಾಣೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ (Dowry Harassment) ಆರೋಪ ಕೇಳಿಬಂದಿದೆ.
ಪವಿತ್ರಾ (29) ಮೃತ ದುರ್ದೈವಿ. ಪವಿತ್ರಾಳ ಪತಿ ಪ್ರಿಯದರ್ಶನ್ ಬಿಎಂಟಿಸಿ ನೌಕರನಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿದಿನ ಪತಿ ಕಿರುಕುಳ ನೀಡುತ್ತಿದ್ದ ಅನ್ನೋ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಾಗರದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿದ ಅಗ್ನಿವೀರ್ ಯೋಧನ ಅಂತ್ಯಕ್ರಿಯೆ
ನಿನ್ನೆ ಕೂಡ ಪತಿ ಪ್ರಿಯದರ್ಶನ್ ನೀಡುತ್ತಿದ್ದ ಕಿರುಕುಳ ಕುರಿತು ಪವಿತ್ರಾ ತಾಯಿಯೊಂದಿಗೆ ಹೇಳಿಕೊಂಡಿದ್ದರಂತೆ. ಬೆಳಗಾಗುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪವಿತ್ರಾ ಶವ ಪತ್ತೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಬಾಹುಬಲಿ ಬೆಟ್ಟದಲ್ಲಿ ಶೋಧ – 20 ಅಡಿ ಅಗಲ, 10 ಅಡಿ ಆಳಕ್ಕೆ ಭೂಮಿ ಬಗೆದರೂ ಸಿಗದ ಕಳೇಬರ
ಈ ಸಂಬಂಧ ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಪ್ರಿಯದರ್ಶನ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ