ಮಕ್ಕಳೊಂದಿಗೆ ನದಿಗೆ ಹಾರಿದ್ದ ನೊಂದ ಸಂತ್ರಸ್ತೆಗೆ ಸಭಾಪತಿ ಸಾಂತ್ವನ

Public TV
1 Min Read

ಗದಗ: ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿದ್ದ ನೊಂದ ಸಂತ್ರಸ್ತೆಗೆ ನೀನು ನಮ್ಮ ತಂಗಿ ಸಮ, ಈಗಾದ ತಪ್ಪು ಮತ್ತೊಮ್ಮೆ ಆಗದಿರಲಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ರಿಲೇಶನ್‍ಶಿಪ್‍ನಲ್ಲಿದ್ದಾಗ ಕಲಿಬೇಕು, ಮುಂದೆ ಹೋಗುತ್ತಿರಬೇಕು: ಸೋನಾಕ್ಷಿ ಸಿನ್ಹಾ

basavaraj horatti

ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಉಮಾದೇವಿ ಶೆಲ್ಲಿಕೇರಿ ಎಂಬವರು ಮಕ್ಕಳೊಂದಿಗೆ ಕಳೆದ 29 ರಂದು ಮಲಪ್ರಭಾ ನದಿಗೆ ಹಾರಿದ್ದರು. ಇದರಲ್ಲಿ ಮಹಿಳೆ ಬದುಕುಳಿದಿದ್ದು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ವರ್ಷದ ಶ್ರೇಷ್ಠಾ ಎಂಬ ಮಗು ಮೃತಪಟ್ಟಿದೆ. ಇಬ್ಬರು ಮಕ್ಕಳು ಬಚಾವ್ ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ್ ಹೊರಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದರು.

basavaraj horatti

ನೀನು ನಮ್ಮ ತಂಗಿ ಸಮ, ಈಗಾದ ತಪ್ಪು ಮತ್ತೊಮ್ಮೆ ಆಗದಿರಲಿ. ಮತ್ತೊಮ್ಮೆ ಜೀವನದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ. ನಿಮ್ಮ ಸಹಾಯಕ್ಕೆ ನಾವಿರುತ್ತೆವೆ ಎದೆಗುಂದದಿರು ಎಂದು ಧೈರ್ಯ ತುಂಬಿದರು. ಇದನ್ನೂ ಓದಿ: ಸಭೆಗೆ ಕೋಟಾ ಶ್ರೀನಿವಾಸ ಪೂಜಾರಿ ಗೈರು- ಕಾದು ಸುಸ್ತಾದ ಅಧಿಕಾರಿಗಳು

basavaraj horatti

ಮಕ್ಕಳನ್ನು ಮುಂದಿಟ್ಟುಕೊಂಡು ಜೀವನ ನಡೆಸು ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ. ಜೀವನದಲ್ಲಿ ಜಿಗುಪ್ಸೆ, ಕಷ್ಟದ ನಿರ್ಧಾರ ಕೈಬಿಡು. ಗಂಡನ ಪೆನ್ಸೆನ್‍ಗೆ ವ್ಯವಸ್ಥೆ ಮಾಡಿದೆ. ಮಕ್ಕಳ ಶಿಕ್ಷಣ ನೋಡಿಕೊಳ್ಳುತ್ತೇನೆ. ಮತ್ತೊಮ್ಮೆ ಹೀಗೆ ಮಾಡಿದರೆ ನಿನ್ನ ಯಾರೂ ಕ್ಷಮಿಸುವುದಿಲ್ಲ. ಮುಂದೆ ಮಕ್ಕಳು ಕ್ಷಮಿಸುವುದಿಲ್ಲ. ಆ ದೇವರು ಕ್ಷಮಿಸಲ್ಲ. ಮಕ್ಕಳೊಂದಿಗೆ ಮೃತಪಟ್ಟಿದ್ದರೇ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿದ್ದೀಯಾ? ಅಂತ ಪ್ರಶ್ನೆ ಮಾಡಿದರು.

basavraj horatti

ಮತ್ತೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಸಾಂತ್ವನಕ್ಕೆ ಮಹಿಳೆ ಕೈ ಮುಗಿದು ಕಣ್ಣೀರಿಟ್ಟರು. ಹೊರಟ್ಟಿಯವರ ಬಳಿ ತನ್ನ ಎರಡು ಮಕ್ಕಳಾದ ತನುಶ್ರೀ ಹಾಗೂ ಅನುಶ್ರೀ ಮಕ್ಕಳನ್ನು ನೋಡಿ ಬಿಕ್ಕಿ, ಬಿಕ್ಕಿ ಅತ್ತಳು. ವೈದ್ಯರು ಹಾಗೂ ಸಿಬ್ಬಂದಿಗೆ ಇವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಇದನ್ನೂ ಓದಿ: 10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

Share This Article
Leave a Comment

Leave a Reply

Your email address will not be published. Required fields are marked *