ಈಕೆಯದ್ದು ಸರ್ಕಾರಿ ವೃತ್ತಿ, ಪ್ರೀತಿ ಹೆಸ್ರಲ್ಲಿ ಚೀಟ್ ಮಾಡೋದು ಪ್ರವೃತ್ತಿ!

Public TV
1 Min Read

ತುಮಕೂರು: ಫೇಸ್‍ಬುಕ್‍ನಲ್ಲಿ ಶ್ರೀಮಂತ ಯುವಕರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಹಣ ವಸೂಲಿ ಮಾಡುತ್ತಿದ್ದ ಬೆಸ್ಕಾಂ ನ ಮಹಿಳಾ ಎಫ್‍ಡಿಎ ಯನ್ನು ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ಕೊರಟಗೆರೆ ತಾಲೂಕಿನ ದೊಗ್ಗನಳ್ಳಿಯ ನಿವಾಸಿ ದೊಡ್ಡಮಣಿ ಬಂಧಿತ ಆರೋಪಿ. ದೊಡ್ಡಮಣಿ ಕಳೆದ ಮೂರು ವರ್ಷದಿಂದ ಫೇಸ್ ಬುಕ್ ನಲ್ಲಿ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ವಿಳಾಸ ಮತ್ತು ಮೊಬೈಲ್ ಸಂಖ್ಯೆ ಪಡೆದುಕೊಂಡು ಸ್ನೇಹ ಸಂಪಾದಿಸುತಿದ್ದಳು.

ಫೇಸ್ ಬುಕ್‍ನಲ್ಲಿ ಸ್ನೇಹ ಸಂಪಾದಿಸಿದ ಬಳಿಕ ನಂತರ ಸಿನೆಮಾ, ಪಾರ್ಕ್ ಗೆ ಬರುವಂತೆ ಒತ್ತಾಯಿಸುತಿದ್ದಳು. ಈ ವೇಳೆಯಲ್ಲಿ ಜೊತೆಯಲ್ಲಿ ಫೋಟೋ ತೆಗೆದುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತಿದ್ದಳು ಎನ್ನಲಾಗಿದೆ. ಸದ್ಯ ದೊಡ್ಡಮಣಿ ಮಧುಗಿರಿಯ ಬೆಸ್ಕಾಂ ವಿಭಾಗದಲ್ಲಿ ಎಫ್‍ಡಿಎ ಆಗಿ ಕೆಲಸ ಮಾಡಿಕೊಂಡಿದ್ದಾಳೆ. ಸರ್ಕಾರದಿಂದ ಸುಮಾರು 30 ರಿಂದ 40 ಸಾವಿರ ಸಂಬಳ ಪಡೆಯುವ ಈಕೆ ಶೋಕಿಗಾಗಿ ಯುವಕರನ್ನು ಪರಿಚಯ ಮಾಡಿಕೊಂಡು ಅವರ ಜೊತೆಗೆ ತೆಗೆದುಕೊಂಡ ಫೋಟೋಗಳನ್ನು ಫೇಸ್ ಬುಕ್‍ನಲ್ಲಿ ಹಾಕುವ ಮೂಲಕ ಬ್ಲಾಕ್ ಮೇಲ್ ಮಾಡುವ ಮೂಲಕ ಹಣ ಕೇಳುತ್ತಿದ್ದಳು.

ಇದನ್ನೂ ಓದಿ: ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

ಅಲ್ಲದೆ ದೊಡ್ಡಮಣಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ನಾಲ್ಕಕ್ಕೂ ಹೆಚ್ಚು ಯುವಕರ ವಿರುದ್ದ ದೂರು ನೀಡಿದ್ದಳು. ಈ ದೂರಿನ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರಿಗೆ ವಂಚಕಿಯ ನಿಜ ಬಣ್ಣ ತಿಳಿದಿದೆ.

Share This Article
Leave a Comment

Leave a Reply

Your email address will not be published. Required fields are marked *