ಈಕೆಗೆ ಬೇಕು ಮದುವೆಗೊಬ್ಬ, ಸಂಸಾರಕ್ಕೊಬ್ಬ-ಯಾಮಾರಿ ಹಿಂದೆ ಬಿದ್ರೆ ಮಾಡ್ತಾಳೆ ಊರಹಬ್ಬ!

Public TV
2 Min Read

ಕೊಪ್ಪಳ: ಅವಳು ಅತಿಲೋಕ ಸುಂದರಿ ಅವಳ ಆ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಆ ಸೌಂದರ್ಯಕ್ಕೆ ಪ್ರೀತಿ, ಪ್ರೇಮ, ಪ್ರಣಯದ ಎಂಬ ಬಣ್ಣ ಹಚ್ಚಿ ಯುವಕರನ್ನ ತನ್ನ ಬಲೆ ಬೀಳಿಸಿಕೊಳ್ಳುವುದು ಆಕೆಯ ಕಾಯಕ. ಅಪ್ಪಿತಪ್ಪಿ ಅಮಾಯಕ ಹುಡುಗರು ಇವಳ ಕೈಗೆ ಸಿಕ್ಕರೆ ಮುಗೀತು ಅವರ ಕಥೆ ಮುಗೀತು ಎಂದರ್ಥ. ಮತ್ತೊಂದು ಸರಿ ಹುಡುಗಿಯರ ಮುಖ ನೋಡೋಕೆ ಹಿಂದೆ ಮುಂದೆ ನೋಡಬೇಕು ಹಾಗೆ ರೋಧಿಸಿ ಕೊನೆಗೆ ಮತ್ತೊಬ್ಬನ ಜೊತೆ ಲವ್ವಿಡವ್ವಿ ಅಂತಾ ಓಡಾಡೋಕೆ ಶುರು ಮಾಡುತ್ತಾಳೆ. ಆಗ ಹಳೇ ಹುಡುಗನ ಕಥೆ ಮುಗೀತು ಯಾಕಂದ್ರೆ ಅವನು ಒಬ್ಬ ಫ್ರಾಡ್ ಅಂತ ಎಲ್ಲರೂ ಮುಂದೇನು ಹೇಳಿಕೊಂಡು ತಿರುಗಾಡುತ್ತಾಳೆ.

ಆ ಚೆಲುವ ಹೆಸರು ಶ್ರೀ ಲತಾ. ಇವಳ ಮೈ ಮಾಟ ನೋಡಿದ್ರೆ ಎಂತವರು ಮೋಸ ಹೋಗುತ್ತಾರೆ. ಇವಳ ಮೋಹದ ಬಲೆಯಲ್ಲಿ ಸಿಲುಕಿದವವೇ ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿಶ್ವ. ಒಂದು ವರ್ಷದ ಹಿಂದೆ ಶ್ರೀಲತಾ ಜೊತೆ ವಿಶ್ವ ಮದುವೆ ಮಾಡಿಕೊಂಡಿದ್ದನು. ಅದು ಅವನಿಗೆ ಮೊದಲನೇ ಮದುವೆ ಆದ್ರೆ, ಈಕೆಗೆ 2ನೇ ಮದುವೆಯಾಗಿತ್ತು. ಮೊದಲು ವಿಜಯಪುರ ಮೂಲದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದ ಶ್ರೀಲತಾ 6 ವರ್ಷ ಆತನೊಂದಿಗೆ ಸಂಸಾರ ನಡೆಸಿ ನಂತರ ಆತನಿಗೆ ವಿಚ್ಚೇಧನ ನೀಡಿದ್ದಳು. ಬಳಿಕ ವಿಶ್ವನ ಜೊತೆ ಮದುವೆ ಮಾಡಿಕೊಳ್ಳಲು ಅವರ ಮನೆಯವರ ಜೊತೆ ಮಾತಾಡಿ ಮದುವೆಯ ಎಲ್ಲಾ ಸಿದ್ಧತೆ ಮಾಡಿದ್ದಳು. ಈ ವಿಶ್ವ ಇಷ್ಟು ಚಂದ ಇರೋ ಹುಡುಗಿ ಮತ್ತೆ ಸಿಗಲ್ಲ ಅಂತಾ ಆತುರಕ್ಕೆ ಬಿದ್ದು ಎಲ್ಲರ ಸಮ್ಮುಖದಲ್ಲೇ ಮದುವೆ ಆಗಿದ್ದನು.

 

ಮದುವೆಯಾಗಿ ಇಬ್ಬರೂ ಬೆಂಗಳೂರಲ್ಲಿ ಕೆಲ ತಿಂಗಳು ಸಂಸಾರ ನಡೆಸಿದ್ದಾರೆ. ನಂತರ ಹುಡುಗಿಗೆ ಬೆಂಗಳೂರಿನ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದೆ. ಕೆಲಸ ಸಿಕ್ಕ 3 ತಿಂಗಳಿಗೆ ಹುಡುಗಿ ಶೋಕಿಗೆ ಬಿದ್ದು ವಿಶ್ವನ ಜೊತೆ ಖ್ಯಾತೆ ತಗೆದು ಇವನನ್ನು ಬಿಟ್ಟು ಹೋಗಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಫ್ರೆಂಡ್ ಸರ್ಕಲ್ ನಲ್ಲಿ ನನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡು ಮತ್ತೊಬ್ಬನ ಜೊತೆ ಸುತ್ತಾಡಿದ್ದಾಳೆ. ಇಷ್ಟೆಲ್ಲಾ ಗೊತ್ತಿದ್ದರೂ ಈ ಪುಣ್ಯಾತ್ಮ ಮಾತ್ರ ನೀನು ಒಂದು ಹೆಣ್ಣಾಗಿ ನನ್ನ ಬಾಳಿಗೆ ಬರುವುದಾದರೆ ಬಾ ನಾನು ನಿನ್ನನ್ನ ಅಂಗೈಯಲ್ಲಿಟ್ಟು ನೋಡಿಕೊಳ್ಳುತ್ತೇನೆ. ಎಂದು ಆಕೆಗೆ ಕೆಲ ಕಂಡೀಷನ್ ಹಾಕಿದ್ದಾನೆ.

ಇವಳ ಈ ಆಟಕ್ಕೆ ಆಕೆಯ ಅಮ್ಮನೇ ಫುಲ್ ಸಪೋರ್ಟ್ ಅಂತೆ. ಬೈದು ಬುದ್ದಿ ಹೇಳೋದು ಬಿಟ್ಟು ತನ್ನ ಮಗಳು ಹೇಳಿದಂತೆ ಕುಣಿಯುತ್ತಾಳೆ ಎಂದು ವಿಶ್ವ ಆಕ್ರೋಶವನ್ನು ವ್ಯಕ್ತಪಡಿಸುತ್ತಾನೆ. ಇವಗಲಾದರೂ ಅವಳಿಗೆ ಬುದ್ದಿ ತಿಳಿದು ಬರಲಿ ಇಲ್ಲಾಂದ್ರೆ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ತಿರುಗಾಡುವುದು ಬಿಡಲಿ ಎಂದು ಮನವಿ ಮಾಡುತ್ತಾನೆ. ಏನೇ ಆಗಲಿ ಬಣ್ಣ ಮೈಮಾಟ ನೋಡಿ ಪ್ರೀತಿ ಪ್ರೇಮ ಎಂದು ಮರಳಾಗೋ ಯುವಕರು ಇದರಿಂದ ಪಾಠ ಕಲಿಯಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *