ಹಾಸನ: ವೈಯಕ್ತಿಕ ದ್ವೇಷದಿಂದ ಸಲೂನ್ ಶಾಪ್‌ಗೆ ನುಗ್ಗಿ ಮಹಿಳೆ ಮೇಲೆ ಮಹಿಳೆಯರ ಗ್ಯಾಂಗ್ ಹಲ್ಲೆ ನಡೆಸಿರುವ ಘಟನೆ ಹಾಸನದ (Hassan) ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಶೀಲಾ.ಎಸ್.ಆರ್. ಎಂದು ಗುರುತಿಸಲಾಗಿದೆ. ಅರ್ಪಿತಾ, ಮೋನಿಕಾ, ಸುಚಿತ್ರಾ, ಪಂಕಜ, ತಿಲಕ್ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕೆಆರ್‌ಎಸ್ ಪಕ್ಷದ ಮುಖಂಡ ರಮೇಶ್ ಪತ್ನಿ ಅರ್ಪಿತಾ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಶೀಲಾ ಅದೇ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಶೀಲಾ ಮೇಲೆ ಅರ್ಪಿತಾ ಕಳ್ಳತನದ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಶೀಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗಿನಿಂದಲೂ ಶೀಲಾ ಮೇಲೆ ಅರ್ಪಿತಾ ಮೇಲೆ ಹಗೆತನ ಸಾಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಂಗಳೂರು| ನಿಷೇಧಿತ PFI ಸಂಘಟನೆ ಆಕ್ಟೀವ್ ಮಾಡಿದ್ದ ಧರ್ಮಗುರು ಅರೆಸ್ಟ್
ಇದಾದ ಬಳಿಕ ಶೀಲಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದ ಅರ್ಪಿತಾ, ಶೀಲಾ ಕೆಲಸಕ್ಕೆ ಸೇರಿದ ಕಡೆಗಳಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಅಪಪ್ರಚಾರ ಮಾಡುತ್ತಿದ್ದರು. ಇತ್ತೀಚಿಗೆ ಚನ್ನಪಟ್ಟಣದಲ್ಲಿರುವ ಸ್ಲ್ಯಾಶ್ ಯುನಿ ಸೆಕ್ಸ್ ಸಲೂನ್‌ನಲ್ಲಿ ಶೀಲಾ ಕೆಲಸ ಮಾಡುತ್ತಿದ್ದು, ಶೀಲಾ ವಿರುದ್ಧ ಅರ್ಪಿತಾ ಮಾಲೀಕರಿಗೆ ದೂರು ಹೇಳಿದ್ದರು. ಇದೇ ವಿಚಾರಕ್ಕೆ ಶೀಲಾ ಹಾಗೂ ಅರ್ಪಿತಾ ನಡುವೆ ಮಾತಿನ ಚಕಮಕಿ ನಡೆದಿತ್ತು.
ಶುಕ್ರವಾರ (ಅ.10) ಸಲೂನ್‌ಗೆ ನುಗ್ಗಿದ ಅರ್ಪಿತಾ ಹಾಗೂ ಇತರರು ಶೀಲಾ ಮೇಲೆ ಹಲ್ಲೆ ನಡೆಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ