ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿ – ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಯತ್ನಿಸಿದ್ದಾಕೆ ಅರೆಸ್ಟ್‌

Public TV
2 Min Read

– ಒಬ್ಬನಿಂದ ಬೇರ್ಪಟ್ಟ ಕೆಲ ದಿನಗಳಲ್ಲೇ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ

ಹಾಸನ: ಅನೈತಿಕ ಸಂಬಂಧಕ್ಕೆ (Immoral Relationship) ಅಡ್ಡಿಯಾಗಿದ್ದ ತನ್ನ ಕುಟುಂಬಸ್ಥರಿಗೆ ಚಟ್ಟಕಟ್ಟಲು ಯತ್ನಿಸಿದ್ದಾಕೆಯನ್ನ ಪೊಲೀಸರು ಬಂಧಿಸಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು (Belur) ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಹೌದು. ಅನ್ನಕ್ಕೆ ವಿಷ ಹಾಕಿ ಪತಿ, ಮಕ್ಕಳು ಹಾಗೂ ಅತ್ತೆ-ಮಾವನ ಕೊಲೆಗೆ ಯತ್ನಿಸಿದ್ದ ಆರೋಪಿ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ. ಚೈತ್ರಾ (33) ಬಂಧಿತ ಮಹಿಳೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

ಏನಿದು ಘಟನೆ?
11 ವರ್ಷಗಳ ಹಿಂದೆ ಗಜೇಂದ್ರ ಎಂಬವರೊಂದಿಗೆ ಚೈತ್ರಾ ವಿವಾಹವಾಗಿದ್ದಳು. ಕೆಲ ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಆದ್ರೆ ಕಳೆದ ಮೂರು ವರ್ಷಗಳಿಂದ ಸಣ್ಣ-ಪುಟ್ಟ ವಿಚಾರಕ್ಕೂ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಈ ನಡುವೆಯೇ ಚೈತ್ರಾಳಿಗೆ ಪುನೀತ್‌ ಎಂಬಾತ ಪರಿಚಯವಾಗಿದ್ದ. ಇಬ್ಬರಿಗೂ ಸಲುಗೆ ಬೆಳೆದಿತ್ತು. ಹೀಗಾಗಿ ಪುನೀತ್‌ ಜೊತೆಗೆ ಚೈತ್ರಾ ಅನೈನಿಕ ಸಂಬಂಧ ಹೊಂದಿದ್ದಳು. ಇದನ್ನೂ ಓದಿ: Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

ಚೈತ್ರ-ಪುನೀತ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ ಗಜೇಂದ್ರ ಈ ವಿಚಾರವನ್ನ ಚೈತ್ರಾಳ ತಂದೆ-ತಾಯಿಗೆ ತಿಳಿಸಿದ್ದ. ಕೊನೆಗೆ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಬಳಿಕ ದಂಪತಿ ಅನ್ಯೋನ್ಯವಾಗಿದ್ದರು. ಪುನಃ ಕೆಲ ದಿನಗಳಿಂದ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮುನ್ನ ಹಾಗೂ ತನ್ನ ಅಕ್ರಮ ಸಂಬಂಧಕ್ಕೆ ಗಂಡ, ಮಕ್ಕಳು, ಅತ್ತೆ-ಮಾವ ಅಡ್ಡಿಯಾಗುತ್ತಾರೆ ಎಂಬ ಅನುಮಾನದಿಂದ ಎಲ್ಲರನ್ನೂ ಸಾಮೂಹಿಕವಾಗಿ ಮುಗಿಸುವ ಸ್ಕೆಚ್‌ ಹಾಕಿದಳು. ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ಗೆ ಡಿಕ್ಕಿಯಾದ ಬಿಎಂಟಿಸಿ ಬಸ್ – 10ಕ್ಕೂ ಹೆಚ್ಚು ಮಂದಿಗೆ ಗಾಯ

ಪತಿ ಹಾಗೂ ಅವರ ಕುಟುಂಬದವರಿಗೆ ತಿಳಿಯದಂತೆ ಊಟ-ತಿಂಡಿಯಲ್ಲಿ ವಿಷಯುಕ್ತ ಮಾತ್ರೆಗಳನ್ನು ಹಾಕುತ್ತಿದ್ದಳು. ಇದಕ್ಕೆ ಪರಸಂಗ ಹೊಂದಿದ್ದ ಶಿವು ಸಹಕಾರ ನೀಡಿದ್ದ. ಈ ವಿಷಯ ತಿಳಿದು ಪತಿ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ಬಳಿಗ ಪೊಲೀಸರು ಚೈತ್ರಾಳನ್ ನಬಂಧಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article