ಹಾಸನ: ಬೇಲೂರಿನ (Belur) ಗಣೇಶ ಮೂರ್ತಿಗೆ (Ganesha Idol) ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನದ (Hassan) ಗುಡ್ಡೇನಹಳ್ಳಿ ಬಳಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಬಾಣಾವರ ಪಿಎಸ್‌ಐ ಸುರೇಶ್, ಶೋಭಾ ನೇತೃತ್ವದ ತಂಡ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಮುಂದಾಗಿದೆ. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು
ಪ್ರಕರಣ ಏನು?
ಹಾಸನ ಜಿಲ್ಲೆಯಲ್ಲಿ ಮಹಾಲಯ ಅಮವಾಸ್ಯೆಯ ಬೆನ್ನಲ್ಲೇ ಮಹಿಳೆಯೊಬ್ಬರು ವಿಕೃತಿ ಮೆರೆದಿದ್ದಾರೆ. ಬೇಲೂರು ಪಟ್ಟಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಳಗ್ಗೆ ಭಕ್ತಾಧಿಗಳು ಕೈ ಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಕೃತ್ಯ ಖಂಡಿಸಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ – ಸೆ.27ರಂದು ಬನ್ನಿ ಮಂಟಪದಲ್ಲಿ ವೈಮಾನಿಕ ಪ್ರದರ್ಶನ
ಇನ್ನು ಪ್ರತಿಭಟನಾ ಸ್ಥಳಕ್ಕೆ ಬೇಲೂರು ತಹಸೀಲ್ದಾರ್, ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ರು. ಮತ್ತೊಂದೆಡೆ ಅರ್ಚಕರು ಶುದ್ಧಿಕಾರ್ಯ ನಡೆಸಿದ್ದಾರೆ. ತನಿಖೆಗೆ ಮುಂದಾದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ಮಹಿಳೆಯೊಬ್ಬರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಎಂಟ್ರಿಯಾದ ದೃಶ್ಯ ಸೆರೆಯಾಗಿದೆ. ಕಬ್ಬಿಣದ ಬಾಗಿಲು ತೆರೆದು ಒಳಗೆ ಬಂದ ಆಕೆ ಗಣೇಶ ಮೂರ್ತಿ ಬಳಿ ಹೋಗಿರುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ನವರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ – ಸ್ವದೇಶಿ ವಸ್ತುಗಳನ್ನು ಖರೀದಿಸಿ: ಮೋದಿ ಕರೆ
ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿಕಾರಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತುಷ್ಟೀಕರಣದ ಪರಾಕಾಷ್ಟೆ ಮುಟ್ಟುತ್ತಿದೆ. ಮತಾಂಧ ಮುಸ್ಲಿಮರು ಗಡಿಬಿಡಿ ಕೆಲಸ ಮಾಡುತ್ತಾರೆ. ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್ ಪ್ರೋತ್ಸಾಹ ಇದೆ. ಹೀಗಾಗಿ ಇಂಥಾ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇತ್ತ ಶಾಸಕ ಹೆಚ್.ಕೆ ಸುರೇಶ್ ಮಾತನಾಡಿ, ಹೀನ ಕೃತ್ಯವೆಸಗಿದವರ ಮೇಲೆ ಕ್ರಮ ಆಗಬೇಕು. ಆರೋಪಿಯನ್ನು ಬಂಧಿಸಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ದರು. ಘಟನಾ ಸ್ಥಳಕ್ಕೆ ಸಿ.ಟಿ ರವಿ ಭೇಟಿ ನೀಡಿ.ಪ್ರತಿಭಟನೆ ನಡೆಸಿ, ಕೃತ್ಯವನ್ನು ಖಂಡಿಸಿದರು. ಇದನ್ನೂ ಓದಿ: ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್