2 ಬಾರಿ ಜೈಲಿಗೆ ಹೋಗಿಬಂದ್ರೂ ಗೃಹಿಣಿಯನ್ನ ಮಂಚಕ್ಕೆ ಬಾ ಎಂದು ಪೀಡಿಸುತ್ತಿರೋ ಕಾಮುಕ

Public TV
2 Min Read

ನನ್ನ ಬಿಟ್ಟು ಗಂಡನಿಂದ ಗರ್ಭಿಣಿಯಾಗಿದ್ದಾಳೆಂದು ಬೈಕಿನಿಂದ ಗುದ್ದಿ ಮಹಿಳೆಗೆ ಗರ್ಭಪಾತ

ಬೆಂಗಳೂರು: ವ್ಯಕ್ತಿಯೊಬ್ಬ 2 ಬಾರಿ ಜೈಲಿಗೆ ಹೋದರೂ ಗೃಹಿಣಿಯೊಬ್ಬರನ್ನು ಮಂಚಕ್ಕೆ ಬಾ ಎಂದು ಪೀಡಿಸುತ್ತಿರುವ ಘಟನೆ ನಗರದ ಮೈಸೂರು ರಸ್ತೆಯ ನ್ಯೂ ಟಿಂಬರ್ ಯಾರ್ಡ್ ಲೇಔಟ್‍ನಲ್ಲಿ ನಡೆದಿದೆ.

ಆರೋಪಿ ಸೆಲ್ವಕುಮಾರ್ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಲಂ ಬೋರ್ಡ್ ನಲ್ಲಿ ವಾಸವಾಗಿದ್ದಾನೆ. ಈತ ತನಗೆ ಬೇಕು ಎಂದ ಹೆಣ್ಣನ್ನ ಅನುಭವಿಸಲೇಕು ಅನ್ನೋ ಕಾಮಪಿಶಾಚಿ. ಈತನ ಕಣ್ಣು ಕಳೆದ ಮೂರು ವರ್ಷದಿಂದ ಮನೆ ಮುಂದೆ ವಾಸವಿರುವ ಗೃಹಿಣಿ ಪದ್ಮಾವತಿ ಅವರ ಮೇಲೆ ಬಿದ್ದಿದೆ.

ಮದುವೆಯಾದ ಗೃಹಿಣಿಯನ್ನ ಮಂಚಕ್ಕೆ ಬಾ ಎಂದು ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ಮನೆ, ಆಫೀಸ್ ಎನ್ನದೆ ಹಿಂಬಾಲಿಸಿ ಟಾರ್ಚರ್ ನೀಡುತ್ತಿದ್ದ. ಇವನ ಕಾಟ ಸಹಿಸಲಾಗದೇ ಗೃಹಿಣಿ, ನಿಮ್ಮ ಮಗ ನನಗೆ ಹಿಂಸೆ ಕೊಡುತ್ತಿದ್ದಾನೆ ಎಂದು ಸೆಲ್ವನ ತಂದೆ ತಾಯಿಗೆ ತಿಳಿಸಿದ್ದಾರೆ. ಆದರೆ ಅವರು ನನ್ನ ಮಗ ಒಮ್ಮೆ ಆಸೆ ಪಟ್ರೆ ಮುಗಿತು ಅಡ್ಜೆಸ್ಟ್ ಮಾಡ್ಕೋ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪದ್ಮಾವತಿ ಗರ್ಭಿಣಿಯಾಗಿದ್ದರು. ಆದರೆ ಆರೋಪಿ ನನ್ನನ್ನು ಬಿಟ್ಟು ಗಂಡನಿಂದ ಗರ್ಭವತಿ ಆಗಿದ್ದೀಯಾ ಎಂದು ಬೈಕಿನಲ್ಲಿ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಪದ್ಮಾವತಿಗೆ ಗರ್ಭಪಾತವಾಗಿದೆ. ಕೊನೆಗೆ ಇವನ ರೋದನೆಗೆ ಬೇಸತ್ತ ಪದ್ಮಾವತಿ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಸೆಲ್ವನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 143, 354(ಎ)(ಡಿ), 506, 307 ಮತ್ತು 149 ಕಲಂನಡಿ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು. ಆದರೆ ಆರೋಪಿ ಸೆಲ್ವ ಬೇಲ್ ಮೇಲೆ ಹೊರಬಂದಿದ್ದಾನೆ. ಬೇಲ್ ಮೇಲೆ ಹೊರಬಂದ ಮೇಲೂ ಅದೇ ಚಾಳಿ ಮುಂದುವೆರಸಿದ್ದಾನೆ. ಮಂಚಕ್ಕೆ ಬಾ, ಇಲ್ಲ ನಿನ್ನ ಪ್ರಾಣ ತೆಗೀತಿನಿ ಅಂತಾ ಹೆದರಿಸಿದ್ದಾನೆ. ಮತ್ತೆ ನೊಂದ ಮಹಿಳೆ ಪದ್ಮಾವತಿ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ಜೈಲಿಗೆ ಹೋದ ಸೆಲ್ವ ಮತ್ತೆ ರೀಲಿಸ್ ಆಗಿದ್ದಾನೆ.

ಜೈಲಿನಿಂದ ಬೇಲ್ ಮೇಲೆ ಹೊರಬಂದ ಸೆಲ್ವ, ಮನೆ ಮುಂದೆ ಬಂದು ಮೂತ್ರ ವಿಸರ್ಜನೆ ಮಾಡುವುದು, ಗಲಾಟೆ ಮಾಡುವುದು ಮಾಡುತ್ತಿದ್ದ. ಈ ಕಿರಾತಕನ ಕಾಟಕ್ಕೆ ಮಹಿಳೆ ಮನೆಗೆ ಸಿಸಿಟಿವಿ ಆಳವಡಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ಹೇಳಿದರೇ ಸ್ಲಂನಲ್ಲಿ ಇವೆಲ್ಲ ಕಾಮನ್. ನೀನೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಎಂದು ಹೇಳಿದ್ದಾರೆ. ಈಗ ಸಂತ್ರಸ್ತ ಮಹಿಳೆಗೆ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *