ಕೋಲಾರ: ಶಾಸಕ ಅರ್ ವರ್ತೂರು ಪ್ರಕಾಶ್ ದಲಿತರನ್ನ ವಂಚಿಸಿ ಅಕ್ರಮವಾಗಿ ತನ್ನ ಅಣ್ಣನ ಮಗನ ಹೆಸರಲ್ಲಿ ಬೇನಾಮಿ ಆಸ್ತಿ ಗಳಿಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಜೀವ ಬೆದರಿಕೆ ಹಾಕಿ, ತಮ್ಮ ಪ್ರಭಾವ ಬಳಸಿಕೊಂಡು ದಲಿತರಿಂದ ಅಕ್ರಮವಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ಆರ್‍ಟಿಐ ಮುಖಂಡ ಅಂಬರೀಶ್ ಆರೋಪಿಸಿದ್ದಾರೆ.
ಬೆಗ್ಲಿಹೊಸಹಳ್ಳಿ ಗ್ರಾಮದ ದಲಿತ ಮುನಿಯಪ್ಪ ಎಂಬವರ ಒಂದು ಎಕರೆ 30 ಗುಂಟೆ ಜಮೀನನ್ನ, 2009ರಲ್ಲಿ ದಿನೇಶ್ ಬಾಬು ಎಂಬವನಿಗೆ ಮಾಡಿಕೊಟ್ಟು, ಆನಂತರ 2013ರಲ್ಲಿ ಶಾಸಕರ ಅಣ್ಣನ ಮಗ ರಕ್ಷಿತ್ ಹೆಸರಿಗೆ ಮಾಡಿಸಿಕೊಳ್ಳಲಾಗಿದೆ. ಆದ್ರೆ ಮುನಿಯಪ್ಪ 2001ರಲ್ಲಿ ಮರಣ ಪಟ್ಟಿದ್ದು, ದಿನೇಶ್ ಬಾಬು ಕೂಡ ಬದುಕಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಶಾಸಕರು ಹಾಗೂ ಅವರ ಆಪ್ತರು ಭೂಕಬಳಿಕೆ ಮಾಡಿದ್ದಾರೆ ಅಂಥ ಆರೋಪಿಸುತ್ತಿರುವ ಮುನಿಯಪ್ಪ ಪತ್ನಿ ಚೆನ್ನಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಸಕರ ಬೇನಾಮಿ ಆಸ್ತಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.