ವೋಟ್ ಹಾಕಿ, ಶಾಯಿ ಗುರುತು ತೋರಿಸಿದ್ರೆ ಮಾತ್ರ ಪ್ರವಾಸಿತಾಣಗಳಿಗೆ ಎಂಟ್ರಿ – ಕೊಡಗು ಡಿಸಿ

Public TV
1 Min Read

ಮಡಿಕೇರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಕೊಡಗು ಜಿಲ್ಲಾಧಿಕಾರಿ (Kodagu DC) ವಿಶೇಷ ಕ್ರಮ ಅನುಸರಿಸಿದ್ದಾರೆ.

ಅಂದು ಪ್ರವಾಸಿತಾಣಗಳಿಗೆ ಭೇಟಿ ನೀಡುವ ರಾಜ್ಯದ ಪ್ರವಾಸಿಗರು ಮತದಾನದ ಮಾಡಿ ಬಂದ್ರೆ ಮಾತ್ರ ಕೊಡಗಿನ ಪ್ರವಾಸಿತಾಣಗಳಿಗೆ (Kodagu Tourist Place) ಎಂಟ್ರಿ, ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ಇರೋದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸೋ ಮುನ್ನ NEET ವಿದ್ಯಾರ್ಥಿನಿಯರಿಗೆ ಬ್ರಾ, ನಿಕ್ಕರ್ ತೆಗೆಲು ಸೂಚನೆ- ಭಾರೀ ಆಕ್ರೋಶ

5 ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಬೇಕು. ಅದಕ್ಕಾಗಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಂತಾಗೆ ‘ನನ್ನ ರೋಜಾ ನೀನೇ’ ಎಂದ ವಿಜಯ್ ದೇವರಕೊಂಡ

ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಂಡಿರುವ ಕೊಡಗು ಜಿಲ್ಲೆಗೆ ದೇಶ-ವಿದೇಶದ ಪ್ರವಾಸಿಗರು ಬರುತ್ತಾರೆ. ಅಂದು ಹೊರರಾಜ್ಯ, ವಿದೇಶಿ ಪ್ರವಾಸಿಗರಿಗೆ ಪ್ರವಾಸಕ್ಕೆ ಅವಕಾಶವಿರುತ್ತದೆ. ಆದ್ರೆ ರಾಜ್ಯದ ಜನರಿಗೆ ಮತದಾನ ಮಾಡಿಬಂದವರಿಗೆ ಮಾತ್ರ ಪ್ರವೇಶವಿರುತ್ತದೆ. ಭದ್ರತಾ ಸಿಬ್ಬಂದಿ ದ್ವಾರದಲ್ಲೇ ನಿಂತು ವೋಟ್ ಮಾಡಿದ ಶಾಯಿ ಗುರುತನ್ನ ಪರಿಶೀಲಿಸಿ ನಂತರ ಪ್ರವೇಶಕ್ಕೆ ಅನುಮತಿ ನೀಡಲಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯ ರಾಜಾಸೀಟ್, ಅಬ್ಬಿ ಫಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ ಸಾಕಾನೆ ಶಿಬಿರಗಳಿಗೆ ಬರುವ ರಾಜ್ಯದ ಪ್ರವಾಸಿಗರು ಮತದಾನ ಮಾಡಿ ಬಂದ್ರೆ ಎಂಜಾಯ್ ಮಾಡಬಹುದು.

Share This Article