ರೋಡ್ ಹಂಪ್ಸ್ ಕಾಣದೇ 2 ಲಾರಿ, ಬೊಲೆರೋ ನಡುವೆ ಭೀಕರ ಅಪಘಾತ – ಮೂವರು ಗಂಭೀರ

By
1 Min Read

ಆನೇಕಲ್: ರಸ್ತೆಯಲ್ಲಿರುವ ಹಂಪ್ಸ್ (Road Humps) ಕಾಣದೇ ಎರಡು ಲಾರಿ (Lorry) ಹಾಗೂ ಬೊಲೆರೋ (Bolero) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ (Bommasandra) ಸಮೀಪದ ಹೆನ್ನಾಗರ ಗೇಟ್ (Hennagara Gate) ಬಳಿ ನಡೆದಿದೆ.

ಹಂಪ್ಸ್ ಕಾಣದೆ ಮುಂಬದಿ ಹೋಗುತ್ತಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಇದೇ ವೇಳೆ ಬೊಲೆರೋ ವಾಹನಕ್ಕೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದ್ದು, ಎರಡು ಲಾರಿಗಳ ಮಧ್ಯೆ ಬೊಲೆರೋ ವಾಹನ ಸಿಲುಕಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೊಲೆರೋ ವಾಹನದಲ್ಲಿದ್ದ ಮುಷ್ತಾಕ್ (37), ಸಾಧಿಕ್ (45) ಹಾಗೂ ಮುದಾಸಿರ್ (30) ಗಂಭೀರ ಗಾಯಗೊಂಡಿದ್ದಾರೆ. ಇನ್ನುಳಿದಂತೆ ಲಾರಿಯಲ್ಲಿದ್ದ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್; ಪ್ರಮುಖ ಘಟ್ಟ ತಲುಪಿದ ತನಿಖೆ – ಇಂದು ಮತ್ತಷ್ಟು ಜಾಗಗಳ ಗುರುತು

ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ತಂಡ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೊಲೆರೋ ವಾಹನದಲ್ಲಿದ್ದ ಗಾಯಾಳುಗಳನ್ನ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಕ್ರಮ ಸಂಬಂಧ; ಟಾಪ್‌-20 ನಗರಗಳ ಪಟ್ಟಿ ರಿಲೀಸ್‌; ಬೆಂಗಳೂರಿಗೆ ಎಷ್ಟನೇ ಸ್ಥಾನ? – ನಂ.1 ನಗರ ಯಾವುದು?

Share This Article