ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

Public TV
1 Min Read

ಬೆಂಗಳೂರು/ಬಳ್ಳಾರಿ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ (CBI) ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದು ಭಾರೀ ಚರ್ಚೆ ನಡೆಯುತ್ತಿರುವಾಗಲೇ ಸಚಿವ ನಾಗೇಂದ್ರ (Nagendra) ವಿರುದ್ಧದ ಕೇಸ್‌ಗಳನ್ನು ಹಿಂಪಡೆಯಬೇಕು ಎಂಬ ಕೂಗು ಕೇಳಿಬಂದಿದೆ.

ಈ ಹಿಂದೆ ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯಲ್ಲಿಯೇ ನಾಗೇಂದ್ರ ವಿರುದ್ಧ 20ಕ್ಕೂ ಹೆಚ್ಚು ಕೇಸ್ ದಾಖಲಾಗಿತ್ತು. ಈಗ ಅದೇ ನಾಗೇಂದ್ರ, ಸಿದ್ದರಾಮಯ್ಯ ಸಂಪುಟದಲ್ಲಿದ್ದಾರೆ. ಅವರ ಮೇಲೆಯೂ ದ್ವೇಷಪೂರಿತ ಕೇಸ್ ಆಗಿದ್ರೆ ವಾಪಸ್ ಪಡೆಯಬೇಕು. ಡಿಕೆ ಶಿವಕುಮಾರ್‌ಗೆ ಒಂದು ನ್ಯಾಯ, ನಾಗೇಂದ್ರಗೆ ಒಂದು ನ್ಯಾಯವೇ ಎಂದು ಜನಾರ್ದನ ರೆಡ್ಡಿ (Janardhana Reddy) ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ದುಬೈ ಪ್ರಯಾಣಕ್ಕೆ ಡಿಕೆಶಿಗೆ ಕೋರ್ಟ್ ಅನುಮತಿ

 

ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ನಾಗೇಂದ್ರ ವಿರುದ್ಧದ ಕೇಸ್ ಹಿಂಪಡೆಯುವ ಅಗತ್ಯ ಬಿದ್ದರೆ ಅದನ್ನು ತೆಗೆಯುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಕೇಸ್‌?
ಈಗಲ್ ಟ್ರೇಡಿಂಗ್ ಕಂಪನಿ ಮೂಲಕ ಅಕ್ರಮ ಗಣಿಗಾರಿಕೆ ಮಾಡಿ ರಾಜ್ಯದ ಬೊಕ್ಕಸಕ್ಕೆ 2.82 ಕೋಟಿ ರೂ. ನಷ್ಟ ಮಾಡಿದ ಆರೋಪ ನಾಗೇಂದ್ರ ಮೇಲಿದೆ. ಒಟ್ಟು ಆರು ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿದ್ದು ನಾಗೇಂದ್ರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.

Share This Article