ನೀವು ನಮ್ಮ ಪ್ರಧಾನಿ ಆಗಿದ್ರೆ ಚೆನ್ನಾಗಿರ್ತಿತ್ತು: ಸುಷ್ಮಾ ಸ್ವರಾಜ್‍ಗೆ ಪಾಕ್ ಮಹಿಳೆ ಟ್ವೀಟ್

Public TV
2 Min Read

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ ಸಹಾಯ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಾಕಷ್ಟು ಜನರ ಪ್ರೀತಿ ಗಳಿಸಿದ್ದಾರೆ. ಇದೀಗ ಆ ಸಾಲಿಗೆ ಪಾಕಿಸ್ತಾನದ ಮಹಿಳೆಯೊಬ್ಬರು ಸೇರಿಕೊಂಡಿದ್ದಾರೆ. ನೀವು ನಮ್ಮ ಪ್ರಧಾನ ಮಂತ್ರಿಯಾಗಿದ್ದರೆ ಚೆನ್ನಾಗಿರ್ತಿತ್ತು ಅಂತ ಆ ಮಹಿಳೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

ನಿಮ್ಮ ಮೇಲೆ ಅಗಾಧವಾದ ಪ್ರೀತಿ ಹಾಗೂ ಗೌರವವಿದೆ. ನೀವು ನಮ್ಮ ಪ್ರಧಾನ ಮಂತ್ರಿ ಆಗಬೇಕಿತ್ತು. ಈ ದೇಶ ಬದಲಾಗುತ್ತಿತ್ತು ಅಂತ ಹಿಜಾಬ್ ಅಸಿಫ್ ಎಂಬವರು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಿದ್ದ ಪಾಕಿಸ್ತಾನದ ಪ್ರಜೆಯೊಬ್ಬರ ಪರವಾಗಿ ಅಸಿಫ್ ಅವರು ಸುಷ್ಮಾ ಸ್ವರಾಜ್ ಅವರ ಸಹಾಯ ಕೋರಿದ್ದರು. ಇದಕ್ಕೆ ಕೂಡಲೇ ಸುಷ್ಮಾ ಸ್ವರಾಜ್ ಸ್ಪಂದಿಸಿದ್ರು. ನಂತರ ಅರ್ಜಿದಾರರ ಸಂಪರ್ಕದಲ್ಲಿದ್ದೇವೆ. ಮುಂದಿನದನ್ನು ನೋಡಿಕೊಳ್ತೀವಿ ಎಂದು ಇಸ್ಲಾಮಾಬಾದ್‍ನ ಭಾರತೀಯ ಹೈ ಕಮಿಷನ್ ಟ್ವೀಟ್ ಮಾಡಿದೆ.

ಇದಕ್ಕೆ ಧನ್ಯವಾದ ತಿಳಿಸಿದ ಹಿಜಾಬ್ ಅಸಿಫ್, ನಿಮ್ಮನ್ನ ಏನೆಂದು ಕರೆಯಲಿ? ಸೂಪರ್‍ವುಮನ್? ದೇವರು ಎನ್ನಲೇ? ನಿಮ್ಮ ಉದಾರತೆಯನ್ನು ವರ್ಣಿಸಲು ಪದಗಳೇ ಇಲ್ಲ. ನಿಮ್ಮ ಬಗ್ಗೆ ಪ್ರೀತಿ ಇದೆ. ಕಣ್ಣಿರಿನೊಂದಿಗೆ ನಿಮ್ಮನ್ನು ಹೊಗಳುವುದನ್ನ ನಿಲ್ಲಿಸಲಾಗ್ತಿಲ್ಲ ಅಂತ ಟ್ವೀಟ್ ಮಾಡಿದ್ದರು. ಇದಕ್ಕೆ ಆನಂದ್ ಸಿಂಗ್ ಎಂಬ ವ್ಯಕ್ತಿಯೊಬ್ಬರು ಅಭಿನಂದನೆ, ನಿಮಗೆ ವೀಸಾ ಸಿಗುತ್ತದೆ. ಆದ್ರೆ ಪಾಕಿಸ್ತಾನದ ಪ್ರಧಾನಿಯಾಗಿ ಸುಷ್ಮಾ ಮೇಡಂ ಅವರನ್ನ ಕಳಿಸಲು ಸಾಧ್ಯವಿಲ್ಲ. ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಹಿಜಾಬ್ ಉತ್ತರಿಸಿ, ಪಾಕಿಸ್ತಾನಿಗಳಿಗೆ ಅವರನ್ನು ಪಡೆಯುವ ಅರ್ಹತೆ ಇಲ್ಲ ಎಂದಿದ್ದಾರೆ.

https://twitter.com/Hijaab_asif/status/890623277663760385?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Fwish-you-were-our-pm-pak-woman-tweets-sushma-swaraj-after-visa-help-1730156

https://twitter.com/Hijaab_asif/status/890620465886052353?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Fwish-you-were-our-pm-pak-woman-tweets-sushma-swaraj-after-visa-help-1730156

https://twitter.com/Hijaab_asif/status/890619024605827072?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Fwish-you-were-our-pm-pak-woman-tweets-sushma-swaraj-after-visa-help-1730156

ವೈದ್ಯಕೀಯ ಚಿಕಿತ್ಸೆಗಾಗಿ ಸಾಕಷ್ಟು ಜನ ಪಾಕಿಸ್ತಾನದಿಂದ ಭಾರತಕ್ಕೆ ಬರ್ತಾರೆ. ತಿಂಗಳಿಗೆ ಸುಮಾರು 500 ರೋಗಿಗಳು ಪಾಕಿಸ್ತಾನದಿಂದ ಬರ್ತಾರೆ ಅಂತ ಕೆಲವು ಆಸ್ಪತ್ರೆಗಳು ಹೇಳಿವೆ. ಆದ್ರೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಬೇಹುಗಾರಿಕೆ ಆರೋಪದ ಮೇಲೆ ಗಲ್ಲು ಶಿಕ್ಷೆ ಆದೇಶ ನೀಡಿದ ನಂತರ ಮೆಡಿಕಲ್ ವೀಸಾ ಪ್ರಕ್ರಿಯೆ ನಿಧಾನವಾಗಿದೆ.

ಜಾಧವ್ ಅವರನ್ನ ಸಂಪರ್ಕಿಸಲು ಕೋರಿ ಭಾರತ ಮಾಡಿದ್ದ ಮನವಿಗಳಿಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಪಾಕಿಸ್ತಾನ ವಿದೇಶಾಂಗ ಇಲಾಖೆಯ ಸಲಹೆಗಾರ ಸರ್ತಾಜ್ ಅಜೀಜ್ ಅವರ ವಿರುದ್ಧ ಗರಂ ಆಗಿದ್ದರು. ನಂತರ ಭಾರತಕ್ಕೆ ಬರಲು ಪಾಕಿಸ್ತಾನದ ಪ್ರಜೆಗಳಿಗೆ ಮೆಡಿಕಲ್ ವೀಸಾ ಬೇಕಿದ್ದಲ್ಲಿ ಅವರ ವಿದೇಶಾಂಗ ಇಲಾಖೆಯಿಂದ ಪತ್ರ ಇರಬೇಕು ಎಂದು ಟ್ವೀಟ್ ಮಾಡಿದ್ದರು.

ಇದೇ ತಿಂಗಳ ಆರಂಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಒಸಾಮಾ ಅಲಿ ಎಂಬ ವ್ಯಕ್ತಿ ಲಿವರ್ ಟ್ಯೂಮರ್ ಚಿಕಿತ್ಸೆಗಾಗಿ ದೆಹಲಿಗೆ ಬರಲು ವೀಸಾ ಬೇಕಿತ್ತು. ಅಜೀಜ್ ಅವರು ವೀಸಾಗಾಗಿ ಭಾರತೀಯ ಹೈ ಕಮಿಷನ್‍ಗೆ ಪತ್ರ ಬರೆಯಲು ನಿರಾಕರಿಸಿದ್ರು ಎಂದು ಒಸಾಮಾ ಅಲಿ ಹೇಳಿದ್ದರು. ಆಗ ಸುಷ್ಮಾ ಸ್ವರಾಜ್ ಸ್ಪಂದಿಸಿ, ಅಲಿ ಅವರು ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿರೋದ್ರಿಂದ ಇದು ಭಾರತದ ಭಾಗವೇ ಆಗಿದ್ದು, ಪಾಕಿಸ್ತಾನದಿಂದ ಪತ್ರ ಬೇಕಿಲ್ಲ ಎಂದು ಟ್ವೀಟ್ ಮಾಡಿದ್ದರು.

ಅಲ್ಲದೆ ಹಿಜಾಬ್ ಅಸಿಫ್ ಅವರ ಸಮಸ್ಯೆ ಬಗ್ಗೆ ಪರಿಶೀಲಿಸಲು ಭಾರತೀಯ ಅಧಿಕಾರಿಗಳಿಗೆ ಹೇಳುವ ಮುನ್ನ ಸುಷ್ಮಾ ಸ್ವರಾಜ್ ಅಜೀಜ್ ಅವರ ವಿರುದ್ಧ ಟ್ವಿಟ್ಟರ್‍ನಲ್ಲಿ ಕಿಡಿ ಕಾರಿದ್ದರು. ಇಂತಹ ಗಂಭೀರ ಪ್ರಕರಣದಲ್ಲೂ ನಿಮಗೆ ಪತ್ರ ಕೊಡಲು ಅಜೀಜ್ ನಿರಾಕರಿಸಿದ್ರಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

https://twitter.com/Hijaab_asif/status/890615371182559232?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

https://twitter.com/Hijaab_asif/status/890611822327353345?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

https://twitter.com/Hijaab_asif/status/890612594037358592?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

https://twitter.com/Hijaab_asif/status/890611166266839044?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

Share This Article
Leave a Comment

Leave a Reply

Your email address will not be published. Required fields are marked *