ಚುಮು ಚುಮು ಚಳಿಗೆ ಶಾಲನ್ನು ಸ್ಟೈಲಿಶ್ ಮಾಡುವುದು ಹೇಗೆ?

Public TV
1 Min Read

ಫ್ಯಾಷನ್ ದುನಿಯಾದಲ್ಲಿ ಬೆಚ್ಚಗಿಡುವ ಶಾಲನ್ನು (Shawls) ಸ್ಟೈಲಾಗಿ ಧರಿಸಿದ್ದಲ್ಲಿ ಈ ಸೀಸನ್‌ನಲ್ಲಿಯೂ ಫ್ಯಾಷೆನಬಲ್ (Fashion) ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲೀಶ್‌ಗಳು. ಪ್ರತಿಯೊಬ್ಬರ ಮನೆಯ ವಾರ್ಡ್ ರೊಬ್‌ನಲ್ಲಿ ಒಂದಲ್ಲ ಒಂದು ಶೈಲಿಯ ಶಾಲು ಸ್ಥಾನ ಪಡೆದಿರುತ್ತದೆ. ಮಹಿಳೆಯರು ಹಾಗೂ ಪುರುಷರು ಇಬ್ಬರೂ ಕೂಡ ಶಾಲು ಧರಿಸುವುದನ್ನು ನಾವು ನೋಡಿದ್ದೇವೆ. ಮೊದಲೆಲ್ಲಾ ಶಾಲು ಮಧ್ಯ ವಯಸ್ಕರ ಫ್ಯಾಷನ್ ಎನ್ನಲಾಗುತ್ತಿತ್ತು. ಆದರೆ ಇದೀಗ ಇದು ಚಳಿಗಾಲದ ಫ್ಯಾಷನ್‌ನಲ್ಲಿ ಸೇರಿದೆ. ಯುವಕ-ಯುವತಿಯರು ಕೂಡ ಹೇಗೆಲ್ಲಾ ಸ್ಟೈಲಾಗಿ ಧರಿಸಬಹುದು ಎಂಬುದನ್ನು ಸಾಕಷ್ಟು ಬ್ಯೂಟಿ ಬ್ಲಾಗ್‌ಗಳು ಹಾಗೂ ಯೂ ಟ್ಯೂಬ್‌ನಲ್ಲಿ ಕಾಣಬಹುದು.

ಧರಿಸುವ ಔಟ್‌ಫಿಟ್‌ಗೆ ತಕ್ಕಂತೆ ಶಾಲನ್ನು ಆಯ್ಕೆ ಮಾಡಿದಾಗ ಅಥವಾ ಶಾಲಿನ ಫ್ಯಾಬ್ರಿಕ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವುದು. ಉದಾಹರಣೆಗೆ ಸೀರೆ, ಸಲ್ವಾರ್ ಅಥವಾ ವೆಸ್ಟರ್ನ್ ಔಟ್‌ಫಿಟ್‌ಗೆ ತಕ್ಕಂತೆ ಧರಿಸಬೇಕು.

ಉಲ್ಲನ್ ಶಾಲ್ ಆದಲ್ಲಿ ಆದಷ್ಟೂ ಹೆಚ್ಚು ಚಳಿಯಿದ್ದಾಗ ಧರಿಸಬೇಕು. ಯಾಕೆಂದರೇ ದೇಹ ಅತಿ ಬೇಗ ಬೆಚ್ಚಗಾಗಿ ಸೆಕೆಯಾಗಬಹುದು. ಇದನ್ನು ಪೊಂಚೊ ಶೈಲಿಯಲ್ಲೂ ಧರಿಸಬಹುದು ಅಥವಾ ಸುತ್ತಿಕೊಳ್ಳಬಹುದು.

ಪುರುಷರು ಶಾಲನ್ನು ಹೊದೆಯುವುದಾದಲ್ಲಿ ಆದಷ್ಟೂ ಉಲ್ಲನ್ ಆವಾಯ್ಡ್ ಮಾಡುವುದು ಉತ್ತಮ. ಇತರೇ ಮೆಟಿರಿಯಲ್‌ನದ್ದು ಯಾವುದಾದರೂ ಓಕೆ. ಮಫ್ಲರ್‌ನಂತೆಯೂ ಧರಿಸಬಹುದು, ಹೊದಿಯಬಹುದು. ಇದನ್ನೂ ಓದಿ:ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರು ಬೀಳಲು ನಾನು ಬಕ್ರನಾ- ಸ್ನೇಹಿತ್‌ಗೆ ನಮ್ರತಾ ಪ್ರಶ್ನೆ

ಡಿಸೈನರ್ ಶಾಲು ಆದಲ್ಲಿ ಹುಡುಗಿಯರು ಉಡುಪಿನ ಒಂದು ಕಡೆಗೆ ಮಾತ್ರ ದುಪಟ್ಟಾದಂತೆ ಧರಿಸಬಹುದು. ಇದು ನೋಡಲು ಚೆನ್ನಾಗಿ ಕಾಣುತ್ತದೆ. ಚಳಿಯಾದಾಗ ಎರಡೂ ಕಡೆ ಹೊದಿಯಬಹುದು.

ಶಾಲು ಅತಿ ದಪ್ಪಗಿದ್ದಲ್ಲಿ ಸ್ಟೋಲ್‌ನಂತೆ ಧರಿಸಲು ಕಷ್ಟವಾಗಬಹುದು. ಹಾಗಾಗಿ ಹುಡುಗಿಯರು ಕ್ಯಾಶುವಲ್ ಔಟ್‌ಫಿಟ್ ಮೇಲೆ ಅದನ್ನು ಟೈ ನಂತೆ ಕತ್ತಿಗೆ ಲೂಸಾಗಿ ಸುತ್ತಿಕೊಳ್ಳಬಹುದು.

ಕೊನೆಯ ಅಂಚನ್ನು ಟೈ ಮಾಡಬೇಕು. ಮುಂಭಾಗಕ್ಕೆ ವಿ ನೆಕ್ ಬರುವ ಹಾಗೆ ಇಳೆ ಬಿಡಬೇಕು. ಇದು ನೋಡಲು ಪೋಂಚೋ ರೀತಿಯಲ್ಲಿ ಕಾಣಿಸುತ್ತದೆ.

Share This Article