ಭಾರತಕ್ಕೆ ದಾವೂದ್ ಇಬ್ರಾಹಿಂ ಅಸ್ತಾಂತರಿಸುತ್ತೀರಾ? – ಮಾಧ್ಯಮದವರ ಪ್ರಶ್ನೆಗೆ ‘ಶ್’ ಅಂದ ಪಾಕ್

Public TV
2 Min Read

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed), ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಬೇಕಾದ ವಾಟೆಂಡ್ ಕ್ರಿಮಿನಲ್ಸ್‌ಗಳಾಗಿದ್ದು, ಈ ಇಬ್ಬರು ಭಯೋತ್ಪದಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥರು ನುಳುಚಿಕೊಂಡಿದ್ದಾರೆ.

Contents

ಇಂಟರ್‌ಪೋಲ್ ಜನರಲ್ ಅಸೆಂಬ್ಲಿಗಾಗಿ (Interpol General Assembly) ದೆಹಲಿಗೆ ಇಸ್ಲಾಮಾಬಾದ್‍ನಿಂದ (Islamabad) ಇಬ್ಬರು ಸದಸ್ಯರ ನಿಯೋಗದ ಭಾಗವಾಗಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‍ಐಎ) (Federal Investigation Agency) ಮಹಾನಿರ್ದೇಶಕ ಮೊಹ್ಸಿನ್ ಬಟ್ (Mohsin Butt) ಆಗಮಿಸಿದ್ದರು. ಈ ವೇಳೆ ದಾವೂದ್ ಇಬ್ರಾಹಿಂ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸುತ್ತದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವೆ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಕಾಶ್ಮೀರದ ವಿವಾದ, ಇತ್ತೀಚೆಗೆ ಮುಕ್ತಾಯಗೊಂಡ ಯುಎನ್ ಜನರಲ್ ಅಸೆಂಬ್ಲಿ ಸೇರಿದಂತೆ ಹಲವಾರು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನಿ ನಿಯೋಗ ಭಾರತಕ್ಕೆ ಆಗಮಿಸಿತ್ತು. ಸಾಮಾನ್ಯ ಸಭೆಯು ಇಂಟರ್‌ಪೋಲ್‍ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ. ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರಲಾಗುತ್ತದೆ.

ಇಂಟರ್‌ಪೋಲ್ ಅಸೆಂಬ್ಲಿಯನ್ನು (Interpol’s Assembly) ಉದ್ದೇಶಿಸಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದ್ದರು. ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಶುಕ್ರವಾರದವರೆಗೂ ನಡೆಯುತ್ತದೆ. ಮಂತ್ರಿಗಳು, ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಲೀಸ್ ಅಧಿಕಾರಿಗಳು ಸೇರಿದಂತೆ 195 ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗಗಳು ಈ ಈವೆಂಟ್‍ನಲ್ಲಿ ಭಾಗವಹಿಸುತ್ತಿವೆ. 1997ರಲ್ಲಿ ನಡೆದಿದ್ದ ಇಂಟರ್‌ಪೋಲ್ ಜನರಲ್ ಅಸೆಂಬ್ಲಿ ಸಭೆ ಸುಮಾರು 25 ವರ್ಷಗಳ ನಂತರ ಭಾರತದಲ್ಲಿ ನಡೆಯುತ್ತಿದೆ.

Live Tv

[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *