ಈ ವರ್ಷವೇ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ ರೋ-ಕೊ?

Public TV
2 Min Read

– ಅಕ್ಟೋಬರ್‌ನ ಆಸೀಸ್‌ ಸರಣಿ ಈ ಜೋಡಿಗೆ ನಿರ್ಣಾಯಕ

ಮುಂಬೈ: ಭಾರತೀಯ ಕ್ರಿಕೆಟ್‌ನ ಐಕಾನ್‌ಗಳಾದ ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ (Virat Kohli) ಏಕದಿನ ಕ್ರಿಕೆಟ್‌ಗೆ ಈ ವರ್ಷದಲ್ಲೇ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು. ಟೆಸ್ಟ್‌‌ ಹಾಗೂ ಟಿ20 ಕ್ರಿಕೆಟ್‌ಗೆ (T20 Cricket) ಈಗಾಗಲೇ ನಿವೃತ್ತಿ ಘೋಷಿಸಿರುವ ರೋಹಿತ್‌, ವಿರಾಟ್‌ ಇದೀಗ ಏಕದಿನ ಕ್ರಿಕೆಟ್‌ ವೃತ್ತಿ ಜೀವನಕ್ಕೂ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಮೂಲಗಳ ಪ್ರಕಾರ, 2027ರ ಏಕದಿನ ವಿಶ್ವಕಪ್‌ ತಂಡದಲ್ಲಿ ಈ ಜೋಡಿ ಸ್ಥಾನ ಪಡೆಯುವುದು ಖಚಿತವಿಲ್ಲ. ಈಗಾಗಲೇ ಇಬ್ಬರೂ ದಿಗ್ಗಜರು ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕಾರಣ ಮುಂಬರುವ ವರ್ಷಗಳಲ್ಲಿ ಪಂದ್ಯದ ಸಮಯವೂ ಸೀಮಿತವಾಗಿರಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ (Indian Cricket) ನಿಯಂತ್ರಣ ಮಂಡಳಿ ಕೂಡ ಇವರಿಬ್ಬರ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಇದಕ್ಕೆ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಇದನ್ನೂ ಓದಿ: 1 ತಿಂಗಳ ಬಳಿಕ ಬಿಳಿ ಗಡ್ಡದಲ್ಲಿ ಕೊಹ್ಲಿ ಪ್ರತ್ಯಕ್ಷ – ಏಕದಿನ ನಿವೃತ್ತಿ ಲೋಡಿಂಗ್ ಅಂತ ಪರ-ವಿರೋಧ ಚರ್ಚೆ

ರೋಹಿತ್‌ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ (World Cup 2027) ರೇಸ್‌ನಲ್ಲಿ ಉಳಿಯಬೇಕಾದ್ರೆ ಈ ವರ್ಷ ಡಿಸೆಂಬರ್‌ನಲ್ಲಿ ಶುರುವಾಗಲಿರುವ ದೇಸಿ ಕ್ರಿಕೆಟ್‌ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತೆ. ಇಲ್ಲದಿದ್ದರೆ, ಬಹುತೇಕ ಏಕದಿನ ಕ್ರಿಕೆಟ್‌ನಿಂದಲೂ ಔಟ್‌ ಆಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

ಶೀಘ್ರದಲ್ಲೇ ನಿವೃತ್ತಿ ಸಾಧ್ಯತೆ
ಭಾರತದ ಮುಂದಿನ ಏಕದಿನ ಸರಣಿ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಸರಣಿ ಐಕಾನಿಕ್‌ ಜೋಡಿಗೆ ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಈ ಸರಣಿಯಲ್ಲಿ ರೋಹಿತ್‌ ಕೊಗ್ಲಿ ಆಡಿದ್ರೆ, ಮುಂದಿನ ಭವಿಷ್ಯದ ಬಗ್ಗೆ ನಿರ್ಧಾರವಾಗಲಿದೆ. ಆಯ್ಕೆ ಸಮಿತಿ ಈ ಸರಣಿಯಿಂದ ಕೈಬಿಟ್ಟರೆ, ಏಕದಿನ ಕ್ರಿಕೆಟ್‌ ವೃತ್ತಿ ಜೀವನಕ್ಕೂ ಈ ಜೋಡಿ ತೆರೆ ಎಳೆಯಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

ಗಿಲ್‌ ಮೇಲೆ ಹೆಚ್ಚಿದ ಭರವಸೆ
ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ʻಆಂಡರ್ಸನ್‌-ತೆಂಡೂಲ್ಕರ್‌ʼ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾದ ಯುವ ನಾಯಕ ಗಿಲ್‌ ಅವರ ಯಶಸ್ಸು ಆಯ್ಕೆ ಸಮಿತಿಗೆ ನಂಬಿಕೆ ತಂದುಕೊಟ್ಟಿದೆ. ಹೀಗಾಗಿ 2027ರ ವಿಶ್ವಕಪ್‌ಗೆ ಹೊಸ ಪ್ರತಿಭೆಗಳೊಂದಿಗೆ ಮುನ್ನಡೆಯಲು ಬಿಸಿಸಿಐ ನಿರ್ಧರಿಸಿದ್ದು, ಶುಭಮನ್‌ ಗಿಲ್‌ ಅವರನ್ನೇ ಟೀಂ ಇಂಡಿಯಾದ ದೀರ್ಘಾವಧಿ ನಾಯಕನ್ನಾಗಿ ಆಯ್ಕೆ ಮಾಡಲು ಆಯ್ಕೆ ಸಮಿತಿ ಎದುರುನೋಡುತ್ತಿದೆ ಎಂದು ವರದಿಗಳು ತಿಳಿಸಿವೆ.

Share This Article