ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

Public TV
1 Min Read

ಅಹಮದಾಬಾದ್‌: ಫೈನಲ್‌ ಪಂದಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಆರ್‌ಸಿಬಿಗೆ (RCB) ಡಬಲ್‌ ಆಘಾತವಾಗಿದೆ. ಫಿಲ್‌ ಸಾಲ್ಟ್‌ (Phil Salt) ಆಡುವುದು ಅನುಮಾನ ಎನ್ನುವಾಗಲೇ ಆಲ್‌ರೌಂಡರ್‌ ಟಿಮ್‌ ಡೇವಿಡ್‌ (Tim David) ಈ ಪಂದ್ಯದಲ್ಲಿ ಆಡುತ್ತಾರಾ ಇಲ್ಲವೋ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ಸ್ನಾಯುಸೆಳೆತಕ್ಕೆ ಒಳಗಾಗಿರುವ ಟಿಮ್ ಡೇವಿಡ್ ಲಕ್ನೋ ಮತ್ತು ಪಂಜಾಬ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯ ಆಡಿಲ್ಲ. ಈ ಬಗ್ಗೆ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

ಈ ಪ್ರಶ್ನೆಗೆ ಪಾಟಿದಾರ್‌, ಇಲ್ಲಿಯವರೆಗೆ ಟಿಮ್ ಡೇವಿಡ್ ಬಗ್ಗೆ ನನಗ್ಯಾವ ಐಡಿಯಾವೂ ಇಲ್ಲ. ಡಾಕ್ಟರ್ ಈ ಬಗ್ಗೆ ನಿಗಾ ಇರಿಸಿದ್ದಾರೆ. ವೈದ್ಯರು ಸಂಜೆ ನಮಗೆ ಮಾಹಿತಿ ನೀಡಲಿದ್ದಾರೆ ಎಂದು ಉತ್ತರಿಸಿದರು. ವೈದ್ಯರು  ಅನುಮತಿ ನೀಡಿದರೆ ಡೇವಿಡ್‌ ಆರ್‌ಸಿಬಿ ಯ ಪ್ಲೇಯಿಂಗ್‌ 11 ಸೇರಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿಗೆ ದೊಡ್ಡ ಶಾಕ್‌ – ಸಾಲ್ಟ್‌ ಆಡೋದು ಅನುಮಾನ

ಟಿಮ್ ಡೇವಿಡ್ ಅನುಪಸ್ಥಿತಿಯಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಲಕ್ನೋ ವಿರುದ್ಧ ಪಂದ್ಯ ಆಡಿದ್ದರು. ಆದರೆ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.

ಈ ಐಪಿಎಲ್‌ನಲ್ಲಿ 12 ಪಂದ್ಯವಾಡಿ 62.33 ಸರಾಸರಿಯಲ್ಲಿ 187 ರನ್‌ ಹೊಡೆದಿದ್ದಾರೆ. 185.15 ಸ್ಟ್ರೈಕ್‌ ರೇಟ್‌ ಹೊಂದಿರುವ ಡೇವಿಡ್‌ 16 ಬೌಂಡರಿ, 14 ಸಿಕ್ಸ್‌ ಮತ್ತು 7 ಕ್ಯಾಚ್‌ ಪಡೆದಿದ್ದಾರೆ.

Share This Article