ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

Public TV
1 Min Read

ಬಿಗ್ ಬಾಸ್ ಸೀಸನ್ 12 (Bigg Boss 12) ಎರಡನೇ ವಾರಕ್ಕೆ ಬಿಗ್ ಶಾಕ್‌ಗೆ ಒಳಗಾಗಿದೆ. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಗಕ್ಕೆ ಮಾಲಿನ್ಯ ನಿಯಂತ್ರ ಮಂಡಳಿಯಿಂದ ನೋಟಿಸ್ ನೀಡಿ ಬೀಗ ಜಡಿಯಲಾಗಿತ್ತು. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳನ್ನ ಎರಡು ದಿನಗಳ ಕಾಲ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ನಂತರ ಡಿಸಿಎಂ ಸೂಚನೆ ಮೆರೆಗೆ ಈಗ ಬಿಗ್ ಬಾಸ್ ಓಪನ್ ಆಗಿದೆ. ಆದರೆ ಶೋ ಶೂಟಿಂಗ್ ಪ್ರಾರಂಭ ಮಾಡಿಲ್ಲ.

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣದಿಂದ ಈ ವಾರದ ವೀಕೆಂಡ್ ಶೋ ಹೇಗಿರುತ್ತೆ? ಎಲಿಮಿನೇಷನ್ (Elimination) ಇರುತ್ತಾ? ಅಥವಾ ಎಲಿಮಿನೇಷನ್ ಪ್ರಕ್ರಿಯೆಯಿಂದ ನಾಮಿನೇಟ್ ಆದ ಸ್ಪರ್ಧಿಗಳು ಬಚಾವ್ ಆಗ್ತಾರಾ ಅನ್ನೋ ಕುತೂಹಲ ಮೂಡಿದೆ.

ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿತ್ತು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಹೊರ ಬಂದಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಉಂಟಾದ ಈ ತೊಡಕುಗಳ ಮಧ್ಯೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಜಾಸ್ತಿಯಾಗಿದೆ.

ಆದರೆ ಈವರೆಗೂ ಬಿಗ್ ಬಾಸ್‌ನಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಬಿಗ್ ಬಾಸ್ ಮನೆ ಓಪನ್ ಆಗಿದೆ. ಒಳಗಡೆ ಇನ್ನೂ ಶೂಟಿಂಗ್ ಆರಂಭವಾಗಿಲ್ಲದ ಕಾರಣದಿಂದ ವೀಕೆಂಡ್ ಶೋ ಯಾವ ರೀತಿ ಇರುತ್ತೆ ಅನ್ನೋ ಪ್ರಶ್ನೆಗಳು ಎದುರಾಗಿವೆ. ಒಂದು ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಕ್ಕು ಶೂಟಿಂಗ್ ಶುರುವಾದ್ರೆ, ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಆಚೆ ಬರಲಿದ್ದಾರೆ ಕಾದು ನೋಡಬೇಕಿದೆ.

ಸದ್ಯ ಒಂಟಿಗಳಲ್ಲಿ ಜಾಹ್ನವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ ನಾಮಿನೇಟ್ ಆಗಿದ್ರೆ, ಜಂಟಿಗಳ ಪೈಕಿ, ಸ್ಪಂದನಾ ಸೋಮಣ್ಣ-ಮಾಳು ನಿಪ್ಪನಾಳ, ಅಭಿಷೇಕ್-ಅಶ್ವಿನಿ ಎಸ್, ರಾಶಿಕಾ ಶೆಟ್ಟಿ-ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ.

Share This Article