2026ರ ಐಪಿಎಲ್‌ ಬೆಂಗಳೂರಿನಲ್ಲೇ ನಡೆಯುತ್ತಾ? – ಪರಮೇಶ್ವರ್‌ ಹೇಳಿದ್ದೇನು?

1 Min Read

– ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನ ಈಡೇರಿಸಬೇಕು ಎಂದ ಗೃಹ ಸಚಿವ

ಬೆಂಗಳೂರು: 2026ರ ಐಪಿಎಲ್‌ (IPL 2026) ಸೇರಿದಂತೆ ಇತರ ಕ್ರಿಕೆಟ್‌ ಪಂದ್ಯಗಳನ್ನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸುವ ಬಗ್ಗೆ ಗೃಹಸಚಿವ ಪರಮೇಶ್ವರ್‌ (G Parameshwar) ಮಾತನಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಹಾಗೂ ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಇತರ ಪಂದ್ಯಗಳನ್ನ ನಡೆಸುವ ಕುರಿತು ಮಾತನಾಡಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ (Venkatesh Prasad) ಹಾಗೂ ಕಾರ್ಯದರ್ಶಿ ವಿನಯ್ ಮೃತ್ಯುಂಜಯ ಭೇಟಿಯಾಗಿದ್ರು. ಮೈಕೆಲ್ ಡಿ ಕುನ್ಹಾ ವರದಿ ಪರಿಶೀಲಿಸಿ ಕ್ರಿಕೆಟ್‌ ಪಂದ್ಯ ನಡೆಸಲು ಅವಕಾಶ ನೀಡುವಂತೆ ಕೇಳಿದ್ದಾರೆ. ಕುನ್ಹಾ ವರದಿಯ ಆಧಾರದ ಮೇಲೆ ನಾನು ಅಧಿಕಾರಿಗಳ ಸಭೆ ನಡೆಸ್ತೀನಿ. ಕುನ್ಹಾ (Michael D Kunha) ವರದಿಯ ಅನುಸಾರ ಕೆಎಸ್‌ಸಿಎ ನಿಯಮಗಳನ್ನ ಫಾಲೋ ಮಾಡ್ತಿದ್ಯಾ ನೋಡಬೇಕು. ಆ ಬಳಿಕ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ತಂಡ ಪ್ರಕಟ – ಗಿಲ್‌ ಔಟ್‌, ಅಕ್ಷರ್‌ ಪಟೇಲ್‌ಗೆ ಉಪನಾಯಕನ ಪಟ್ಟ

ಸದ್ಯ ಅವರು ವಿಜಯ್ ಹಜಾರೆ ಟ್ರೋಫಿ, ಐಪಿಎಲ್‌ಗೆ ಅವಕಾಶ ನೀಡುವಂತೆ ಕೇಳಿದ್ದಾರೆ. ಕುನ್ಹಾ ವರದಿ ಆಧರಿಸಿ ಮುಂದಿನ ತೀರ್ಮಾನ ಮಾಡ್ತೀನಿ ಅಂತಲೂ ಹೇಳಿದ್ದಾರೆ. ಇದನ್ನೂ ಓದಿ: ಅನ್‌ಕ್ಯಾಪ್‌ ಪ್ಲೇಯರ್‌ ಮಂಗೇಶ್‌ ಯಾದವ್‌ಗೆ 5.20 ಕೋಟಿ – ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?

ಇನ್ನೂ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಪರಮೇಶ್ವರ್‌ ಅವರು, ನಾನು ಕೆಲಸ ಮಾಡುತ್ತೇವೆ ಅಂತ ಜನ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಅದರಂತೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನ ಈಡೇರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಸಂಬಳದಲ್ಲಿ 70% ಇಳಿಕೆ – 7 ಕೋಟಿಗೆ ಆರ್‌ಸಿಬಿಗೆ ವೆಂಕಟೇಶ್‌ ಅಯ್ಯರ್‌ ಮಾರಾಟ

Share This Article