ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ (IPL) ಪಂದ್ಯ ನೋಡೋ ಆಸೆಯಲ್ಲಿರುವ ಆರ್‌ಸಿಬಿ ಅಭಿಮಾನಿಗಳ ಕನಸು ನನಸಾಗುವ ಸಣ್ಣ ಸೂಚನೆ ಸಿಕ್ಕಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನಿಂದಲೇ ಅಂಥದೊಂದು ಸುಳಿವು ಸಿಕ್ಕಿದೆ. ಇಂದು ಅಥವಾ ನಾಳೆ ಬೆಂಗಳೂರಿನಲ್ಲಿ ಆರ್‌ಸಿಬಿ (RCB) ಪಂದ್ಯಗಳನ್ನು ಆಡುತ್ತಾ, ಅಥವಾ ಬೇರೆಡೆಗೆ ಹೋಗುತ್ತಾ ಅನ್ನೋ ಅಧಿಕೃತ ವಿಚಾರ ಹೊರಬೀಳಲಿದೆ.
ಐಪಿಎಲ್ ಆರಂಭಕ್ಕೆ ಇನ್ನೂ ಎರಡು ತಿಂಗಳು ಮಾತ್ರ ಬಾಕಿ ಇದೆ. ಆದ್ರೆ ಆರ್‌ಸಿಬಿ ಮಾತ್ರ ಇನ್ನೂ ತನ್ನ ತವರು ಮೈದಾನವನ್ನ ಅಂತಿಮಗೊಳಿಸಿಲ್ಲ. ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲೇ ಆಡುತ್ತೇವೆ ಅನ್ನೋ ಯಾವುದೇ ಸೂಚನೆಯನ್ನೂ ನೀಡಿಲ್ಲ. ಈ ಮಧ್ಯೆ ಮತ್ತೆ ಆರ್‌ಸಿಬಿ ಬೆಂಗಳೂರಲ್ಲೇ ತವರು ಪಂದ್ಯ ಆಡಬೇಕು ಅನ್ನೋ ಅಭಿಮಾನಿಗಳ ಕೂಗು ಹೆಚ್ಚಿದೆ. ಹೀಗಾಗಿ ಅಭಿಮಾನಿಗಳ ಆಸೆ ಈಡೇರಿಸುವ ನಿಟ್ಟಿನಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಸದ್ಯಕ್ಕೆ ಮುಂದಾದಂತೆ ಕಾಣ್ತಿದ್ದು, ಪೂರಕ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ನಾಳೆ ಸಾರಿಗೆ ನೌಕರರಿಂದ ಬೆಂಗಳೂರು ಚಲೋ – ಸರ್ಕಾರ ಸ್ಪಂದಿಸದಿದ್ರೆ ಸಾಮೂಹಿಕ ರಾಜೀನಾಮೆಗೆ ಪ್ಲಾನ್
ಹೌದು, ಕೆಎಸ್‌ಸಿಎ ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಆಡುವ ನಿರ್ಧಾರ ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿರ್ಧಾರ ಮಾಡಲಿದೆ, ನಮ್ಮದೇನು ಇಲ್ಲ ಅನ್ನೋ ಮಾತನ್ನ ಹೇಳಿ ಆರ್‌ಸಿಬಿ ಕಡೆ ಬೊಟ್ಟು ಮಾಡಿತ್ತು. ಆದರೆ ಆರ್‌ಸಿಬಿ ಇಲ್ಲಿತನಕ ತನ್ನ ನಿರ್ಧಾರ ಬಗ್ಗೆ ಯಾವುದೇ ವಿಚಾರವನ್ನ ಅಧಿಕೃತಗೊಳಿಸಿರಲಿಲ್ಲ. ಈ ನಡುವೆ ಬಿಸಿಸಿಐ ತವರು ಮೈದಾನ ಘೋಷಣೆ ಡೆಡ್‌ಲೈನ್ ಕೂಡ ಮುಗಿದಿದೆ. ಸದ್ಯ ಆರ್‌ಸಿಬಿ ತವರು ಮೈದಾನ ಅಧಿಕೃತ ಮಾಡಲೇಬೇಕಿದೆ. ಈ ಇಕ್ಕಟ್ಟಿನ ನಡುವೆ ಬಿಸಿಸಿಐ ಬಳಿ ಡೆಡ್ಲೈನ್ ವಿಸ್ತರಣೆಗೆ ಮನವಿ ಮಾಡಿರುವ ಆರ್‌ಸಿಬಿ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಸಂಬಂಧ ಸರ್ಕಾರದ ಜೊತೆಗೆ ಮಾತುಕತೆಗೆ ಮುಂದಾಗಿದೆ. ಇದನ್ನೂ ಓದಿ: ಕಾರವಾರ| ಯಾರೂ ಇಲ್ಲದ ವೇಳೆ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿ
ಹೌದು, ನೇರವಾಗಿ ಸರ್ಕಾರದ ಜೊತೆಗೆ ಚರ್ಚೆಗೆ ಆರ್‌ಸಿಬಿ ತಯಾರಿ ನಡೆಸಿದೆ. ಇಂದು ಅಥವಾ ನಾಳೆ ಒಳಗಾಗಿ ಚರ್ಚೆ ಮಾಡಿ, ಹಿಂದಿನ ದುರಂತ ಘಟನೆ ಬಳಿಕ ಆಗಿರುವ ವಿಚಾರಗಳ ಆಗುಹೋಗು ಬಗ್ಗೆ ಚರ್ಚಿಸಲಿದೆ. ಬೆಂಗಳೂರಿನಲ್ಲಿ ಪಂದ್ಯ ಆಡಬೇಕೋ ಬೇಡವೋ ಅನ್ನೋ ಅಧಿಕೃತ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: 23 ರನ್ ಬಿಟ್ಟು ಕೊಟ್ರೂ ಕೊನೆಯಲ್ಲಿ ಸೋಫಿ ಮ್ಯಾಜಿಕ್ – ಗುಜರಾತ್‌ಗೆ ರೋಚಕ 3 ರನ್ ಜಯ
ಇನ್ನು, ಈ ಮಧ್ಯೆ ಕೆಎಸ್‌ಸಿಎ ಮತ್ತು ಪೊಲೀಸ್ ಇಲಾಖೆ ನಡುವೆ ಮತ್ತೊಂದು ಸಭೆ ನಡೆಯಲಿದೆ. ಸಂಜೆ ಚಿನ್ನಸ್ವಾಮಿಯಲ್ಲಿ ಖುನ್ನಾ ವರದಿ ಸಂಬಂಧ ಮತ್ತೊಂದು ಹಂತದ ಪರಿಶೀಲನೆ ಮಾಡಿ, ನಂತರ ಈ ಬಗ್ಗೆ ಸಭೆ ಮಾಡಿ ಮುಂದಿನ ಕ್ರಮಗಳ ಬಗ್ಗೆ ಪೊಲೀಸ್ ಆಯುಕ್ತರು ಸೂಚನೆ ನೀಡಲಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಗಲಭೆ| ಸ್ಥಳ ನಿಯೋಜನೆ ಮಾಡದೇ ಡಿವೈಎಸ್ಪಿ ನಂದಾರೆಡ್ಡಿ ವರ್ಗಾವಣೆ
ಒಟ್ಟಾರೆ ಇಂದು ನಾಳೆಯೇ ಬೆಂಗಳೂರಿನಲ್ಲಿ ಐಪಿಎಲ್ ನಡಯುವ ಸಂಬಂಧ ಅಧಿಕೃತವಾಗಿ ನಿರ್ಧಾರವಾಗಲಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ 18 ವರ್ಷ ಅಭಿಮಾನಿಗಳ ಕೊಟ್ಟ ಪ್ರೀತಿಗೆ ಪೂರಕವಾಗಿ ಎಲ್ಲಾ ನೋವನ್ನು ಮರೆತು ಮತ್ತೆ ಚಿನ್ನಸ್ವಾಮಿಯಲ್ಲಿ ಕಣಕ್ಕಿಳಿಯುತ್ತಾರಾ? ಅಥವಾ ದುರಂತದ ನೋವಿನಲ್ಲೇ ಬೇರೆ ಕಡೆ ಪ್ರಯಾಣ ಬೆಳಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಹೃದಯಾಘಾತಕ್ಕೆ ಪಿಯುಸಿ ವಿದ್ಯಾರ್ಥಿನಿ ಬಲಿ

