ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

Public TV
1 Min Read

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್ ಫೈಟ್ ಶುರುವಾದಂತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ಹಣಕಾಸಿನ ವಿಚಾರವನ್ನು ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಬಹಿರಂಗಪಡಿಸುತ್ತಾರಾ ಎಂಬ ಪ್ರಶ್ನೆಯೊಂದು ಎದ್ದಿದೆ.

ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಮೇಲೆ ಚನ್ನರಾಜ್ ಹಟ್ಟಿಹೊಳಿ (Channaraja hattiholi) ಹಲ್ಲೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಎಫ್‍ಐಆರ್ ಕೂಡ ದಾಖಲಾಗಿದೆ. ಒಂದು ಕಾಲದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಒಂದೇ ಪಕ್ಷದಲ್ಲಿದ್ದ ವೇಳೆ ಪೃಥ್ವಿ ಸಿಂಗ್ ಹಾಗೂ ಎಂಎಲ್‍ಸಿ ಚನ್ನರಾಜ್ ಹಟ್ಟಿಹೊಳಿ ಒಂದಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು.  ಪೃಥ್ವಿ ಸಿಂಗ್ ಮನೆಯನ್ನು ಲೀಜ್‍ಗೆ ಹಾಕಿಕೊಂಡಿದ್ರು.

ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಸೇರುತ್ತಿದಂತೆ ಇತ್ತ ಆಪ್ತರು ಸಹ ದೂರವಾದರು. ಈ ವೇಳೆ ಲೀಜ್ ಪಡೆದ ಪೃಥ್ವಿ ಸಿಂಗ್‍ನಿಂದ ಹೊರ ಬಂದು ಹಣ ವಾಪಸ್ ನೀಡಲು ಬೇಡಿಕೆಯಿಟ್ಟಿದ್ದರು. ಮನೆ ಒಪ್ಪಂದ ಪತ್ರ ಕೇಳಿದ್ದು ನಿಜವೆಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಹೇಳಿದ್ದಾರೆ. ಹೀಗಾಗಿ ಈ ರೀತಿಯ ಒಪ್ಪಂದಗಳು ಆಪ್ತರ ನಡುವೆ ಎಷ್ಟಾಗಿವೆಂಬ ಚರ್ಚೆ ಸಹ ಅರಂಭವಾಗಿದೆ. ಆದರೆ ರಮೇಶ್ ಜಾರಕಿಹೊಳಿ ಮಾತ್ರ ಈ ಘಟನೆಯಲ್ಲಿ ಲ್ಯಾಂಡ್ ಮಾಫಿಯಾ ಕೆಲಸ ಮಾಡ್ತಿದೆ ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ ಪಾರಿಶ್ವಾಡ ಗ್ರಾಮದಲ್ಲಿ ಹೆಂಗಸರು ಗೂಂಡಾಗಿರಿ ಮಾಡುತ್ತಿದ್ದಾರೆ. ಬೆಳಗಾವಿ ಕನಕಪುರ ಆಗ್ತಿದೆಯೆಂದು ಚುನಾವಣೆ ವೇಳೆ ಹೇಳಿದ್ದೆ ಇದೀಗ ಅದು ಸಹ ನಿಜವಾಗಿದೆ. ಹೀಗಾಗಿ ಪೃಥ್ವಿ ಸಿಂಗ್‍ಗೆ ನಿಜ ಸಂಗತಿ ಹೇಳು ಎಂದು ಸೂಚನೆ ಕೊಟ್ಟಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು ನ್ಯಾಯವಾಗಿದ್ದರೆ ನಾವು ಬಂದು ನಿಲ್ಲುತ್ತೇವೆಂದು ರಮೇಶ್ ಜಾರಕಿಹೊಳಿ ಈ ಹೇಳಿಕೆ ಕೊಟ್ಟಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Share This Article