BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

Public TV
1 Min Read

ಕನ್ನಡದ ಬಿಗ್‌ಬಾಸ್ ಸೀಸನ್ 12ರ (BBK 12) ಪ್ರಸಾರದ ದಿನಾಂಕ ಫಿಕ್ಸ್ ಆಗಿರುವುದರಿಂದ ಮನೆಯೊಳಗೆ ಹೋಗುವ ಸ್ಪರ್ಧಿಗಳ ಕುರಿತು ನಿರೀಕ್ಷೆ ಜೋರಾಗಿದೆ.

ಕಾರ್ಯಕ್ರಮ ಪ್ರಸಾರವಾಗೋದಕ್ಕೂ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗುವುದು ಸಾಮಾನ್ಯ. ಅದರಂತೆ ಈ ಬಾರಿಯೂ ದೊಡ್ಮನೆಗೆ ಹೋಗುವ ಸ್ಪರ್ಧಿಗಳ ಸಂಭವನೀಯ ಪಟ್ಟಿ ಮುನ್ನಲೆಗೆ ಬಂದಿದ್ದು ಅದರಲ್ಲಿ ಹಿರಿಯ ನಟಿ ಸುಧಾರಾಣಿ (Actress Sudharani) ಹೆಸರು ಚಾಲ್ತಿಯಲ್ಲಿದೆ.

ಖ್ಯಾತ ನಟಿ ಸುಧಾರಾಣಿ, ಸುದೀಪ್ (Sudeep) ಜೊತೆಯೂ ನಟಿಸಿದ್ದ ನಟಿ, ಇವರು ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ನಟಿ ಸುಧಾರಾಣಿ ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌ ಆಗಿದ್ದು, ಹೆಚ್ಚು ಫಾಲವೋರ್ಸ್‌ ಹೊಂದಿರುವ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಗ್‌ಬಾಸ್ ಸೀಸನ್ 12ರ ಹೈಲೈಟ್ ಕಂಟೆಸ್ಟಂಟ್‌ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ ಎಲ್ಲಾ ವಯೋಮಾನ ಹಾಗೂ ಸಿನಿಮಾ, ಸೀರಿಯಲ್, ಸೋಷಿಯಲ್ ಮೀಡಿಯಾ ಎಲ್ಲದರ ಖ್ಯಾತಿಯನ್ನ ಗಣನೆಗೆ ತೆಗೆದುಕೊಳ್ಳಲಾಗುತ್ತೆ. ಅದರಂತೆ ಸುಧಾರಾಣಿ ಅವರಿಗೆ ಆಹ್ವಾನ ಹೋಗಿದೆ ಎನ್ನಲಾಗುತ್ತಿದೆ.

ಈ ವಿಚಾರವಾಗಿ ಸುಧಾರಾಣಿ ತಮ್ಮ ಇನ್‌ಸ್ಟಾಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. `ಯಾರ್ ಹೇಳಿದ್ದು’ ಎಂದು ಕೇಳಿ ಸಾಕ್ಷಿ ಕೇಳಿದ್ದಾರೆ. ಹೀಗಾಗಿ ಸುಧಾರಾಣಿ ಈ ಮಾತು ಸದ್ಯಕ್ಕೆ ಗೊಂದಲ ಸೃಷ್ಟಿಸಿದ್ದರೂ ಬಿಗ್‌ಬಾಸ್ ಮನೆಯಲ್ಲಿ ಸುಧಾರಾಣಿ ನೋಡುವ ಕುತೂಹಲವಂತೂ ಪ್ರೇಕ್ಷಕರಲ್ಲಿದೆ.

Share This Article