ಬೆಂಗಳೂರು: ಕಾಂಗ್ರೆಸ್ (Congress) ಅಧಿಕಾರ ಹಂಚಿಕೆಯ ಕದನ ತಣ್ಣಗಾಗುವ ಲಕ್ಷಣ ಇಲ್ಲ. ಕಳೆದ ಎರಡು ವರ್ಷಗಳಿಂದ ತಾಳ್ಮೆ, ಆತ್ಮವಿಶ್ವಾಸ, ಶ್ರಮಕ್ಕೆ ತಕ್ಕ ಪ್ರತಿಫಲ, ಭಕ್ತಿ, ನಿಷ್ಠೆ ಬಗ್ಗೆ ಮಾತನಾಡುತ್ತಿರುವ ಡಿಕೆಶಿ (DK Shivakumar) ಪವರ್ ಗೇಮ್ ಬದಲಾಯಿಸಿರುವ ಮುನ್ಸೂಚನೆ ಕೊಟ್ಟಿದ್ದಾರೆ. ಆದರೆ ಪವರ್ ಮುಂದೆ ಪವರ್ ಫುಲ್ ಲೀಡರ್ ಕೂಡ ಪಲ್ಟಿ ಹೊಡೆದ ಉದಾಹರಣೆಗಳಿದ್ದು, ಡಿಕೆಶಿ ಆಯ್ಕೆ ಯಾವುದು? ಎಂಬ ಕುತೂಹಲ ಇದೆ.
ಜನವರಿಗೆ ಡೆಡ್‌ಲೈನ್ ಕೊಟ್ಟಿದ್ದು, ಸಂಕ್ರಾಂತಿ ಬಳಿಕ ಡಿಕೆಶಿ ಮಾಜಿ ಅಧ್ಯಕ್ಷ ಆಗ್ತಾರಾ? ಎಂಬುದು ಕಾಂಗ್ರೆಸ್ ನಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಿದೆ. ಅದಕ್ಕೆ ಪೂರಕವಾಗಿ ಡಿಕೆಶಿ ಕೂಡ ಇವತ್ತು ತಾಳ ಹಾಕಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ಡಿಕೆಶಿಯಿಂದ ಚೆಕ್‌ಮೇಟ್ ಆಟ – ಖರ್ಗೆ ಬಳಿ ಡಿಸೈಡ್ ರಹಸ್ಯ ಏನು?
ಸೋಮವಾರವಷ್ಟೇ (ನ.17) ದೆಹಲಿಯಲ್ಲಿ ಮಾತನಾಡಿದ್ದ ಡಿಕೆಶಿ, ನಾನೇಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾನು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಲ್ಲ ಅಂದಿದ್ದರು. ಆದರೆ ಇವತ್ತು ಬೆಂಗಳೂರಲ್ಲಿ ರಿವರ್ಸ್ ಗೇರ್ ಹಾಕಿ ಅಧ್ಯಕ್ಷ ಸ್ಥಾನ ಬಿಡುವ ಬಗ್ಗೆ ಮಾತನಾಡಿದ್ದಾರೆ.
ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪರ್ಮನೆಂಟ್ ಆಗಿ ಇರಕ್ಕಾಗಲ್ಲ. ಅಧ್ಯಕ್ಷನಾಗಿ ಐದೂವರೆ ವರ್ಷ ಆಯ್ತು, ಸ್ವಲ್ಪ ದಿನಕ್ಕೆ ಆರು ವರ್ಷ ಆಗುತ್ತೆ. ಡಿಸಿಎಂ ಆದ ತಕ್ಷಣವೇ ಬಿಡಬೇಕು ಅಂತಿದ್ದೆ. ಖರ್ಗೆ, ರಾಹುಲ್ ಗಾಂಧಿ ಅವರು ಮುಂದುವರಿ ಡಿಕೆ ಅಂತ ಹೇಳಿದರು. ನಾನು ಅಧಿಕಾರದಲ್ಲಿ ಇರ್ತಿನೋ? ಇರಲ್ವೋ? ಅದು ಇಂಪಾರ್ಟೆಂಟ್ ಅಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಸಂದೇಶ ಕೊಟ್ಟಿದ್ದಾರೆ. ಅದಾದ ಬಳಿಕ ಇದೇನ್ ಹಿಂಗ್ ಹೇಳ್ಬಿಟ್ರಿ ಅಂತಾ ಮಾಧ್ಯಮಗಳು ಕೇಳಿದಾಗ ತೊರೆಯುವುದಲ್ಲ ರೀ, ಗಾಂಧಿ ಕುಟುಂಬ ಹೇಳುವ ತನಕ ಕೆಲಸ ಮಾಡಿಕೊಂಡು ಹೋಗ್ತೀನಿ ಅಂತಾ ಮತ್ತೆ ಚೆಕ್ ಮೇಟ್ ಇಟ್ಟಿದ್ದಾರೆ.ಇದನ್ನೂ ಓದಿ: ಸಕ್ಕರೆ ದರ ಹೆಚ್ಚಳ ಮಾಡಲು ಕೇಂದ್ರ ನಿರ್ಧಾರ – ಸಿದ್ದರಾಮಯ್ಯ, ಡಿಕೆಶಿ ಸ್ವಾಗತ
