ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟುಬಿಡ್ತೀನಿ – ಬಿಜೆಪಿ ಶಾಸಕನಿಗೆ ಟಿಎಂಸಿ ನಾಯಕ ಬೆದರಿಕೆ

Public TV
2 Min Read

ಕೋಲ್ಕತ್ತಾ: ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟು ಬಿಡ್ತೀನಿ ಎಂದು ಬಿಜೆಪಿ ಶಾಸಕ ಶಂಕರ್ ಘೋಷ್ (Shankar Ghosh) ಅವರಿಗೆ ಟಿಎಂಸಿ ನಾಯಕ ಅಬ್ದುರ್‌ ರಹೀಮ್ ಬಕ್ಷಿ (Abdur Rahim Bakshi) ಬೆದರಿಕೆ ಹಾಕಿದ್ದಾರೆ.

ಶನಿವಾರ (ಸೆ.6) ನಡೆದ ಪ್ರತಿಭಟನಾ ಸಭೆಯಲ್ಲಿ ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾಗಿರುವ ಅಬ್ದುರ್ ಭಾಗಿಯಾಗಿದ್ದರು. ಈ ವೇಳೆ ದೇಶದ ಇತರ ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ವಿರುದ್ಧ ನಡೆದ ದೌರ್ಜನ್ಯವನ್ನು ವಿರೋಧಿಸಿ ಮಾತನಾಡುತ್ತಿದ್ದಾಗ ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರು ಉಲ್ಲೇಖಿಸದೇ ಬೆದರಿಕೆ ಹಾಕಿ, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.ಇದನ್ನೂ ಓದಿ: ಹಣ ಕೇಳಿದ್ರೆ ರೇಪ್ ಮಾಡೋದಾಗಿ ಬೆದರಿಕೆ – ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ್ದವಳಿಗೆ ವಂಚನೆ

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶಂಕರ್ ಘೋಷ್ ಅವರು ರಾಜ್ಯದಿಂದ ವಲಸೆ ಬಂದ ಕಾರ್ಮಿಕರನ್ನು ರೋಹಿಂಗ್ಯರು ಅಥವಾ ಬಾಂಗ್ಲಾದೇಶಿಗಳು ಎಂದಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಹೊರಗೆ ಕೆಲಸ ಮಾಡುವ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ. ಅವರು ರೋಹಿಂಗ್ಯರು. ಆದರೆ ಅವರನ್ನು ಬಾಂಗ್ಲಾದೇಶಿಯರು ಎಂದು ನಾಚಿಕೆಯಿಲ್ಲದೆ ಹೇಳಿದ್ದಾನೆ. ಈ ಕುರಿತು ಈ ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನೀವು ಈ ರೀತಿಯಾಗಿ ಮತ್ತೆ ಹೇಳುವುದನ್ನು ನಾನು ಕೇಳಿದರೆ ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟು ಬಿಡ್ತೀನಿ ಎಂದಿರುವುದಾಗಿ ವರದಿಯಾಗಿದೆ.

ಹೇಳಿಕೆ ಬೆನ್ನಲ್ಲೇ ಬಿಜೆಪಿ, ಟಿಸಿಎಂಯನ್ನು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಟಿಎಂಸಿ ಪಕ್ಷದವರು ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೈಕಾಲುಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಟಿಎಂಸಿಗೆ ಇದು ಹೊಸದೇನಲ್ಲ. ಇದು ಅವರ ರಾಜಕೀಯ ಸಂಸ್ಕೃತಿ. ಈ ರೀತಿಯ ಬೆದರಿಕೆಗಳ ಮೂಲಕ ಟಿಎಂಸಿ ರಾಜಕೀಯ ನಡೆಸುತ್ತದೆ ಎಂದು ಕಿಡಿಕಾರಿದೆ.

ಇದು ತೃಣಮೂಲ ಕಾಂಗ್ರೆಸ್‌ನ ಸಂಸ್ಕೃತಿ. ಜನರನ್ನು ಬೆದರಿಸುವುದೇ ಅವರ ಕೆಲಸ. ಮಾಲ್ಡಾದಲ್ಲಿ ಇಂತಹ ಹೇಳಿಕೆಗಳು ಯಾವಾಗಲೂ ಕೇಳುತ್ತಿರುತ್ತವೆ. ಇದರಿಂದಲೇ ಟಿಎಂಸಿ ಅಧ್ಯಕ್ಷರು ಸುದ್ದಿಯಲ್ಲಿರುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲುತ್ತದೆ ಎಂಬ ಭಯದಿಂದಾಗಿ ಈ ರೀತಿ ಮಾಡುತ್ತಿದೆ ಎಂದು ಬಿಜೆಪಿಯವರು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ನ್ಯಾ. ವರ್ಮಾ ವಿರುದ್ಧದ ಕೇಸ್‌ ತನಿಖಾ ಸಮಿತಿಗೆ ಉತ್ತರ ಕನ್ನಡದ ಗಣಪತಿ ಭಟ್‌ ನೇಮಕ

Share This Article