ಬೆಂಗ್ಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ಸಿಗುತ್ತಾ? – ಸಿಎಂ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?

Public TV
1 Min Read

ಬೆಂಗಳೂರು: ಗ್ಯಾರಂಟಿ ಭಾರದ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು (ಫೆ.16) ದಾಖಲೆಯ 15ನೇ ಬಜೆಟ್ (Budget) ಮಂಡಿಸಲಿದ್ದಾರೆ. ಇಂದು ಬೆಳಗ್ಗೆ 10:15ಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ತೆರಿಗೆ ಹೊರೆ ಇಲ್ಲದಂತೆ ಗ್ಯಾರಂಟಿಯೇತರ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಸಿಎಂ ಮಂಡಿಸಲಿರುವ ಈ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಯಾರಿಗೆಲ್ಲಾ ಬಂಪರ್ ಗಿಫ್ಟ್ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಐದು ಗ್ಯಾರಂಟಿಗಳನ್ನು ಕೊಟ್ಟು ಈಗಾಗಲೇ ಜೋಶ್‌ನಲ್ಲಿರುವ ಕಾಂಗ್ರೆಸ್ (Congress) ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 55,000 ಕೋಟಿ ರೂ. ಮೀಸಲಿಡುವ ಸಾಧ್ಯತೆಗಳಿವೆ. ಅಲ್ಲದೇ ಈ ಬಾರಿ ಬಜೆಟ್ ಗಾತ್ರ 3.75 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದ್ದು, ಬೆಂಗಳೂರಿಗೆ (Bengaluru) ಭರಪೂರ ಅನುದಾನದ ನಿರೀಕ್ಷೆಯಿದೆ. ಲೋಕಸಭಾ ಚುನಾವಣಾ ಹೊತ್ತಲ್ಲಿ ಬಂಪರ್ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ಬೆಂಗಳೂರಿಗೆ ನಿರೀಕ್ಷೆ ಏನು?
– ಬೆಂಗಳೂರು ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸುರಂಗ ಮಾರ್ಗ ನಿರ್ಮಾಣಕ್ಕೆ ಅನುದಾನದ ಪ್ರಸ್ತಾಪ, ಮೇಲ್ಸೆತುವೆಗಳ ಪ್ರಸ್ತಾಪ.
– ವೈಟ್ ಟಾಪಿಂಗ್, ರಾಜಕಾಲುವೆ ದುರಸ್ತಿಗೆ ಹೆಚ್ಚಿನ ಅನುದಾನ ಮೀಸಲು, ಅರೆಬರೆ ರಸ್ತೆ ಕಾಮಗಾರಿಗೆ ವೇಗ.
– ಬೆಂಗಳೂರಿನ ಕುಡಿಯುವ ನೀರಿಗೆ ಪ್ರತ್ಯೇಕ ಅನುದಾನದ ನಿರೀಕ್ಷೆ.
– ಮೆಟ್ರೋ ಸಂಪರ್ಕ ಚುರುಕಿನ ಬಗ್ಗೆ ಪ್ರಸ್ತಾಪ ಸಾಧ್ಯತೆ.
– 110 ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪದ ಬಗ್ಗೆ ನಿರೀಕ್ಷೆ
– ಸ್ಕೈ ಡಕ್ ನಿರ್ಮಾಣಕ್ಕೆ ಅನುದಾನದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

Share This Article