ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

Public TV
1 Min Read

– 200 ಕಟ್ಟಡಗಳಿಗೆ ಹಾನಿ

ಸಿಯೋಲ್: ದಕ್ಷಿಣ ಕೊರಿಯಾದ (South Korea) ಆಗ್ನೇಯ ಭಾಗಗಳಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ 24 ಮಂದಿ ಸಾವನ್ನಪ್ಪಿದ್ದು, 200 ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲದೇ ಆ ಪ್ರದೇಶದಲ್ಲಿದ್ದ 27,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಜಿಯೋಂಗ್ ಸಾಂಗ್ ಪ್ರಾಂತ್ಯದ ಸ್ಯಾಚಿಯಾಂಗ್ (Sancheong) ಕೌಂಟಿಯಲ್ಲಿ ಮಾ. 21ರಂದು ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ರಾಜಧಾನಿ ಸಿಯೋಲ್‌ನಿಂದ ಸುಮಾರು 180 ಕಿ.ಮೀ ಆಗ್ನೇಯಕ್ಕಿರುವ ಉಯಿಸಿಯಾಂಗ್ ಕೌಂಟಿ ಭಾಗಕ್ಕೆ ಈ ಬೆಂಕಿಯು ವ್ಯಾಪಿಸಿತ್ತು. ಇದನ್ನೂ ಓದಿ: ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ: ಉಚ್ಚಾಟನೆಗೆ ದಾಸರ ಹಾಡಿನ ಮೂಲಕ ಯತ್ನಾಳ್ ಕೌಂಟರ್

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಗೌನ್ಸಾ ದೇವಾಲಯ ಸೇರಿದಂತೆ ನೂರಾರು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಜೊತೆಗೆ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರವಾಸಿ ತಾಣ ಹಾಹೋ ಫೋಕ್ ಗ್ರಾಮದ 8 ಕಿ.ಮೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿದೆ. ಇದನ್ನೂ ಓದಿ: Aashiqui 3: ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ನಟನೆಯ ಸಿನಿಮಾ ಶೂಟಿಂಗ್‌ ಶುರು

ಉಯಿಸಿಯಾಂಗ್‌ನಲ್ಲಿ (Uiseong) ಕಾಡ್ಗಿಚ್ಚು ನಿಯಂತ್ರಣ ಕಾರ್ಯದಲ್ಲಿದ್ದ ಹೆಲಿಕಾಪ್ಟರೊಂದು ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಕಾಡ್ಗಿಚ್ಚಿನಲ್ಲಿ 26ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ: ಶಿವರಾಮ್ ಹೆಬ್ಬಾರ್

ಉಯಿಸಿಯಾಂಗ್ ಕೌಂಟಿ ಪ್ರದೇಶದಲ್ಲಿ ಹೆಚ್ಚು ಗಾಳಿ ಬೀಸುತ್ತಿದ್ದು, ಬೆಂಕಿಯ ಕೆನ್ನಾಲಿಗೆಯೂ ಅನೇಕ ಪ್ರದೇಶಗಳಿಗೆ ಆವರಿಸಿಕೊಳ್ಳುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಪರಮೇಶ್ವರ್‌ಗೆ ಮುಖ್ಯಮಂತ್ರಿ ಭಾಗ್ಯ: ಹಾಲುಮತ ಗೊರವಯ್ಯರಿಂದ ಕಾರ್ಣಿಕ ಭವಿಷ್ಯ

130 ಹೆಲಿಕಾಪ್ಟರ್, 4,650 ಅಗ್ನಿಶಾಮಕ ದಳ ಹಾಗೂ ಸೈನಿಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Share This Article